ಅಧಿಕಾರಿಗಳ ಬಳಿ ಹಣ ವಸೂಲಿ…

371

ಬೆಂಗಳೂರು/ಮಹದೇವಪುರ:- ಬಲಿಜ ಸಮಾವೇಷಕ್ಕೆ ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಅಧಿಕಾರಿಗಳ ಬಳಿ ಹಣ ವಸೂಲಿ ಮಾಡಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲಾ ಪೂರ್ವ ಸಭೆಯಲ್ಲಿ ಮಂಡೂರು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಕೆಂಪರಾಜ್ ಅಧ್ಯಕ್ಷರೆದುರೇ ಗಂಭೀರ ಆರೋಪ ಮಾಡಿದ್ದಾರೆ.

ವಾ.ಓ. ಹೀಗೆ ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಮುನಿರಾಜು ಹಾಗೂ ಮಂಡೂರು ಜಿಲ್ಲಾ ಪಂಚಾಯ್ತಿ ಸದಸ್ಯ ಕೆಂಪರಾಜು ಪರಸ್ಪರ ಒಬ್ಬರಿಗೊಬ್ಬರು ಮಾತಿನ ಚಕಮಕಿ ನಡೆಸುತ್ತಿರುವ ದೃಶ್ಯ ಕಂಡುಬಂದದ್ದು ಬೆಂಗಳೂರು ಹೊರವಲಯ ಆವಲಯಳ್ಳಿ ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ. ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿಯ ಕ್ರಿಯಾ ಯೋಜನೆ ಸಿದ್ದ ಪಡಿಸಲು ಪೂರ್ವ ತಾಲ್ಲೂಕಿನ ಸಭೆ ಕರೆಯಲಾಗಿತ್ತು, ಈ ಸಭೆಯಲ್ಲಿ 29 ಇಲಾಖೆಗಳ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಅಲ್ಲದೆ, ಜಿಲ್ಲಾ ಪಂಚಾಯಿತಿಯ ಜನಪ್ರತಿನಿಧಿಗಳು ಹಾಜರಿದ್ದರು, ಸಭೆ ಆರಂಭದಲ್ಲೇ ಅಧ್ಯಕ್ಷ ಮುನಿರಾಜು ಮತ್ತು ಸದಸ್ಯ ಕೆಂಪರಾಜು ನಡುವೆ ವಾಗ್ವಾದ ನಡೆದು, ಕೈಕೈ ಮಿಲಾಯಿಸುವ ಹಂತಕ್ಕೂ ಸ್ಥಿತಿ ವಿಕೋಪಗೊಂಡಿತ್ತು, ನೂರಾರು ಅಧಿಕಾರಿಗಳಿದ್ದ ಸಭೆಯಲ್ಲೇ ಸದಸ್ಯ ಕೆಂಪರಾಜು ಬಲಿಜ ಜನಾಂಗದ ಸಮಾವೇಷಕ್ಕೆ ಅಧಿಕಾರಿಗಳಿಂದ ಹಣ ವಸೂಲಿ ಮಾಡಿದ್ದೀರ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಮುನಿರಾಜು ವಿರುದ್ದ ಆರೋಪಿಸಿದರು. ಅಲ್ಲದೆ ನನ್ನ ಬಳಿ ಅಧ್ಯಕ್ಷರು ಅಧಿಕಾರಿಗಳಿಂದ ಹಣ ಪಡೆದಿರುವ ಬಗ್ಗೆ ದೂರ ವಾಣಿ ಸಂಭಾಷಣೆ ಸೇರಿದಂತೆ ಎಲ್ಲಾ ರೀತಿಯ ಸಾಕ್ಷಿಗಳಿದ್ದು, ಮುಂದಿನ ಸಭೆಯಲ್ಲಿ ಬಹಿರಂಗ ಪಡಿಸುವುದಾಗಿ ತಿಳಿಸಿದ್ದಾರೆ. ಇಲಾಖಾ ಅಧಿಕಾರಿಗಳು ಕ್ಷೇತ್ರ ಶಾಸಕರ ಕೈಗೊಂಬೆಗಳಾಗಿದ್ದಾರೆ, ತಮ್ಮ ಇಲಾಖೆ ಯೋಜನೆಗಳ ಮಾಹಿತಯನ್ನು ಜನತೆಗೆ ತಿಳಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಕುಮ್ಮಕ್ಕಿನಿಂದ ಸದಸ್ಯರುಗಳಿಗೆ ಕಿಂಚಿತ್ತು ಮರಿಯಾದೆ ಇಲ್ಲದಂತಾಗಿದೆಂದು ದೂರಿದರು.

ಆರೋಪಗಳಿಗೆ ಉತ್ತರಿಸಿರುವ ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮುನಿರಾಜು ಕೆಂಪರಾಜುರವರು, ಅಧಿಕಾರಿಗಳಿಗೆ ಚೂರು ಮರ್ಯಾದೆ ಕೊಡದೆ ತಮ್ಮ ಮನೆಯಾಳುಗಳಂತೆ ವರ್ತಿಸುತ್ತಾರೆ, ಅಧ್ಯಕ್ಷ ಸ್ಥಾನ ಅವರಿಗೆ ತಪ್ಪಿದ ಹಿನ್ನೆಲೆ ನನ್ನ ಮೇಲೆ ಹಗೆತನ ಸಾಧಿಸಿಕೊಂಡು ಬರುತ್ತಿದ್ದು, ಮಂಡೂರು ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅವ್ಯವಹಾರ ಹಗರಣಗಳ ಕುರಿತು ಸಂಗತಿಗಳು ಬಯಲು ಮಾಡಲು ಪ್ರಾರಂಭಿಸಿದಂತೆಯೇ ನನ್ನ ಮೇಲೆ ಇಲ್ಲ ಸಲ್ಲದ ಆರೋಪಕ್ಕೆ ಮುಂದಾಗಿದ್ದಾರೆಂದು, ನನ್ನ ತೇಜೋವಧೆಗೆ ಯತ್ನಿಸಿರುವ ಸದಸ್ಯ ಕೆಂಪರಾಜು ವಿರುದ್ಧ ಮಾನ ನಷ್ಟ ಮೊಕದ್ದಮೆ ದಾಖಲಿಸಲು ಮುಂದಾಗಿದ್ದೇನೆಂದು ತಿಳಿಸಿದ್ದಾರೆ.

ಒಟ್ಟಾರೆ ಜನಪ್ರತಿನಿಧಿಗಳ ಒಣ ಪ್ರತಿಷ್ಟೆಗೆ ಅಧಿಕಾರಿಗಳ ಅತ್ಯಮೂಲ್ಯ ಸಮಯ ಹಾಳಾಗಿದೆ, ವರ್ಷಕ್ಕೊಮ್ಮೆ ಅಭಿವೃದ್ಧಿಯೆಡೆಗೆ ನಡೆಯುವ ಸಭೆಗಳು ಈ ರೀತಿ ಜನಪ್ರತಿನಿಧಿಗಳ ಪ್ರತಿಷ್ಟಗೆ ಬಲಿಯಾಗುವುದು ವಿಪರ್ಯಾಸವೇ ಸರಿ.