ಮನೆಗೆ ಕಣ್ಣಾ ಹಾಕಿದ ಖದೀಮರು

219

ಬಾಗಲಕೋಟೆ : ನೀರು ಕೇಳುವ ನೆಪದಲ್ಲಿ ಮನೆಗೆ ಬಂದು ಚಿನ್ನದ ಸರ ಹಣ,ಮೊಬೈಲ್ ದೋಚಿ ಕಳ್ಳರು ಪರಾರಿಯಾದ ಘಟನೆ ಬಾಗಲಕೋಟೆ ಜಿಲ್ಲೆ ಬದಾಮಿಯ ರೆವಣಸಿದ್ದೆಶ್ವರ ನಗರದಲ್ಲಿ ನಡೆದಿದೆ.ಹನುಮಂತಪ್ಪ ಬೆಳಕಲ್ ಎಂಬುವವರ ಮನೆಯಲ್ಲಿ ಗಂಡುಮಕ್ಕಳಿಲ್ಲದ ಸಮಯ ನೋಡಿ ಕುಡಿಯಲು ನೀರು ಕೇಳಿದ್ದಾರೆ ಖದೀಮರು.ನೀರು ತರಲು ಮನೆಯೊಳಗೆ ಹೊದಾಗ ಖದೀಮರು ಕೂಡಾಮನೆಯೊಳಗೆ ನೂಸಿಳಿದ್ದು,ಹೆಣ್ಣುಮಗಳಿಗೆ ಚಾಕು ತೊರಿಸಿ ಒಂದುವರೆ ತೊಲೆ ಬಂಗಾರದ ಚೈನ್,ಮೊಬೈಲ್ ಕಿತ್ತುಕೊಂಡು ಮನೆಯಿಂದ ಪರಾರಿಯಾಗಿದ್ದಾರೆ.ಸುದ್ದಿತಿಳಿಯುತ್ತಿದ್ದಂತೆ ಬದಾಮಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡಸಿದ್ರು.