ಯೋಗ ದಿನಾಚರಣೆಗಾಗಿ ಸಾವಿರಾರು ಮಕ್ಕಳಿಂದ ತಾಲೀಮು

252

ಚಾಮರಾಜನಗರ/ ಕೋಳ್ಳೆಗಾಲ: ಪಟ್ಟಣದಲ್ಲಿ ಜೂ.21ರಂದು ನಡೆಯುವ ಯೋಗದಿನಾಚರಣೆಯ ಅಂಗವಾಗಿ ಮಂಗಳವಾರ ಮದ್ಯಾಹ್ನ  ಸಾವಿರಾರು ವಿದ್ಯಾಥಿ೯ಗಳ ಸಮ್ಮುಖದಲ್ಲಿ ಯೋಗದ ತಾಲೀಮು ನಡೆಸಲಾಯಿತು.

ತಹಸಿಲ್ದಾರ್ ಕಾಮಾಕ್ಷಮ್ಮ, ಶಿಕ್ಷಣ ಇಲಾಖೆಯ ದೈಹಿಕ ಪರಿವೀಕ್ಷಕ ಮಹದೇವು, ಇಒ ಡಾ.ದಶ೯ನ್, ಪತಂಜಲಿ ಯೋಗ ಕೇಂದ್ರದ ನಟರಾಜನ್ ಅವರ ಸಮ್ಮುಖದಲ್ಲಿ ಯೋಗಾಭ್ಯಾಸಕ್ಕಾಗಿ ತಾಲೀಮು ನಡೆಸಲಾಯಿತು. ಯೋಗದಲ್ಲಿ  ಎಂಜಿಎಸ್ ವಿ , ವಸಂತಕುಮಾರಿ, ಅಸ್ಸಿಸಿ, ಲಯನ್ಸ್, ಆರ್ ಸಿಎಂ, ಮಾನಸ ಪ್ರೌಡಶಾಲೆ
ಸೇರಿದಂತೆ ಹಲವು ಶಾಲೆಗಳ  ಸಾವಿರಾರು ಮಕ್ಕಳು ಭಾಗವಹಿಸಿದ್ದರು.

ಈಸಂದಭ೯ದಲ್ಲಿ  ಯೋಗದಲ್ಲಿ  ಎಂಜಿಎಸ್ ವಿ , ವಸಂತಕುಮಾರಿ, ಅಸ್ಸಿಸಿ, ಲಯನ್ಸ್, ಆರ್ ಸಿಎಂ, ಮಾನಸ ಪ್ರೌಡಶಾಲೆ ಸೇರಿದಂತೆ ಹಲವು ಶಾಲೆಗಳ ದಂಡಾಧಿಕಾರಿ ಕಾಮಾಕ್ಷಮ್ಮ ಮಾತನಾಡಿ,  ನಾಳೆ ಐದು ಸಾವಿರ ವಿದ್ಯಾಥಿ೯ಗಳು ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ 6ರಿಂದ 10ನೇ ತರಗತಿಯ  ಹಾಗೂ ಕಾಲೇಜಿನ ವಿದ್ಯಾಥಿ೯ಗಳು ಸೇರಿ  ಐದು ಸಾವಿರ ಮಕ್ಕಳು ಪಾಲ್ಗೊಳ್ಳವರು, ಜೂ.21ರಂದು ಬೆಳಗ್ಗೆ 7ಗಂಟೆಗೆ ಯೋಗ ದಿನಾಚರಣೆಯಲ್ಲಿ ಸಂಘ ಸಂಸ್ಥೆಗಳು ಪದಾಧಿಕಾರಿಗಳು ಒಳಗೊಂಡಂತೆ ಗಣ್ಯರು ಭಾಗವಹಿಸುವವರು ಎಂದು ತಿಳಿಸಿದರು.
ಬೆಳಗ್ಗೆ 6-30ಕ್ಕೆ ಯೋಗಾಭ್ಯಾಸಕ್ಕೆ ಕಡ್ಡಾಯವಾಗಿ ಹಾಜರಿರಬೇಕು, ಯೋಗದಿಂದ ಆರೋಗ್ಯವೖದ್ದಿಯಾಗಲಿದ್ದುಕಡ್ಡಾಯವಾಗಿ ಎಲ್ಲರೂ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಬೇಕು ಎಂದರು.