ಊರಮ್ಮ ದೇವಿಗೆ ವಿಶೇಷ ಪೂಜೆ.

419

ಬಳ್ಳಾರಿ /ಹೊಸಪೇಟೆ:ಸಮೃದ್ಧ ಮಳೆ,ಬೆಳೆಗಾಗಿ ಹಾಗೂ ಗ್ರಾಮದ ಸುಭೀಕ್ಷೆಗಾಗಿ, ಗ್ರಾಮ ದೇವತೆ ಊರಮ್ಮ ದೇವಿಗೆ ಮಂಗಳವಾರ ತನುಗೊಡ ಸಮರ್ಪಣೆ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು.
ಗ್ರಾಮ ದೇವತೆ ತನಗೊಡವನ್ನು ಶಿರದ ಮೇಲೆ ಹೊತ್ತು ತಂದ ಕಲ್ಲಳ್ಳಿ ರೈತಾಪಿಜನರು, ಹಲಗೆ ಹಾಗೂ ಡೊಳ್ಳು ವಾದ್ಯದ ಮೂಲಕ ಮೆರವಣಿಗೆ ಮೂಲಕ ಹೊಸಪೇಟೆ ಗ್ರಾಮ ದೇವತೆ ಊರಮ್ಮ ದೇವಿ ದೇವಸ್ಥಾನದ ವರಗೆ ಶ್ರದ್ಧಾ-ಭಕ್ತಿಯಿಂದ ಕರೆ ತಂದರು.

ಗ್ರಾಮ ದೇವತೆ ತನುಗೊಡ ಸಮರ್ಪಣೆ ನಿಮಿತ್ತವಾಗಿ ಸಮಸ್ತ ರೈತಾಪಿವರ್ಗದ ಜನರು, ತಮ್ಮ ಮನೆಯಲ್ಲಿ ಹೋಳಿಗೆ ತಯಾರಿಸಿ, ನಗರದ ಚಿತ್ರಕೇರಿಯಲ್ಲಿರುವ ಊರಮ್ಮ ದೇವಿಗೆ ನೈವೇದ್ಯ ಸಲ್ಲಿಸಿ, ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಇಲ್ಲಿಂದ ಮೆರವಣಿಗೆಯಲ್ಲಿ ತೆರಳಿದ ರೈತರು, ಅನಂತಶಯನ ಗುಡಿ ಗ್ರಾಮದ ಹೆಬ್ಬಾಗಿಲಿಲ್ಲಿ ತನುಗೊಡವ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿದರು.
ದೇವಿಯ ತನುಗೊಡ ಬರುವ ವೇಳೆಯಲ್ಲಿ ನಗರದ ಅಂಗಡಿ-ಮುಂಗಟ್ಟುಗಳ ಬಂದ್ ಮಾಡಿ, ದೇವಿಗೆ ಭಕ್ತಿ ಸಮರ್ಪಣೆ ಮಾಡಿದರು.

ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ಭಾಗವಹಿಸಿ, ತನುಗೊಡ ಅರ್ಪಿಸಿದರು. ಮುಂಜಾಗ್ರತ ಕ್ರಮವಾಗಿ ದಾರಿಯುದಕ್ಕೂ ಪೊಲೀಸರು, ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು. ದೇವಿ ಮೆರವಣಿಗೆ ಬರುವ ವೇಳೆಯಲ್ಲಿ ಯಾವುದೇ ವಾಹನ ಹಾಗೂ ನಾಗರೀಕರು, ಎದುರು ಗೊಳ್ಳುವುದು ನಿಷಿದ್ಧವಾಗಿದ್ದು, ಇದು ಅನಾಧಿ ಕಾಲದಿಂದಲೂ ನಡೆದು ಬಂದ ಗ್ರಾಮದ ಸಂಪ್ರದಾಯವಾಗಿದೆ.