ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ಸಾವು.

281

ಬೆಂಗಳೂರು/ಮಹದೇವಪುರ: ಅನಧಿಕೃತವಾಗಿ ಗ್ಯಾರೆಜ್ ನಿರ್ಮಿಸಿ ಕಾರ್ಮಿಕನೊಬ್ಬ ಸಾವಿಗೆ ಕಾರಣವಾಗಿರುವ ಮಹೇಂದ್ರ ಫಸ್ಟ್ ಚಾಯ್ಸ್ ಗ್ಯಾರೇಜ್ಗೆ ಸ್ಥಳೀಯ ಪಂಚಾಯತಿ ಅಧಿಕಾರಿಗಳು ಮತ್ತು ಅಧ್ಯಕ್ಷರು ದಾಳಿ ನಡೆಸಿ ನೋಟೀಸ್ ಜಾರಿ ಮಾಡಿ ಕ್ರಮ ಕೈಗೊಂಡಿದ್ದಾರೆ.

ಇನ್ನು ಈ ಗ್ಯಾರೇಜ್ ಅನಧಿಕೃತವಾಗಿದ್ದು ಸೇಫ್ಟಿಗಾಗಿ ಸೂಕ್ತ ಕ್ರಮ ಕೈಗೊಳ್ಳದ ಕಾರಣ ಕಾರ್ಮಿಕ ಸರ್ವಿಸ್ ಮಾಡುವಾಗ ವಿದ್ಯುತ್ ಶಾಕ್ ಹೊಡೆದು ಕಾರ್ಮಿಕ ಪ್ರಭು (27) ಸಾವನ್ನಪ್ಪಿದ್ದಾನೆ ಹಾಗಾಗಿ   ಮುಚ್ಚಿಸಿ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಗ್ಯಾರೇಜ್ಗೆ ಬೀಗ ಜಡೆಯಬೇಕೆಂದು ಸ್ಥಳೀಯರು ಬೆಳತ್ತೂರು ಪರಮೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಪಿಡಿಒ ಅಂಬರೀಶ್ ಅವರಿಗೆ ಮನವಿ ಸಲ್ಲಿಸಿದರು.

ಮಹದೇವಪುರ ಕ್ಷೇತ್ರದ ಶೀಗೇಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಮಹೇಂದ್ರ ಫಸ್ಟ್ ಚಾಯ್ಸ್ ಗ್ಯಾರೇಜ್ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಪಂಚಾಯತಿಯಿಂದಾಗಲಿ ಸಂಬಂಧ ಪಟ್ಟ ಇಲಾಖೆಯಿಂದಾಗಲಿ ಯಾವುದೇ ರೀತಿಯ ಅನುಮತಿ ಪಡೆದಿಲ್ಲ, ಅಲ್ಲದೆ ರಾಜಕಾಲುವೆ ಹಾಗೂ ಬಫರ್ ಜೂನ್ನನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದೆ ಎಂದು ಆರೋಪಿಸಿ ಪರಮೇಶ್ ನೇತೃತ್ವದಲ್ಲಿ ಗ್ಯಾರೇಜ್ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಿಂದ ಎಚ್ಚೆತ್ತು ಮರು ದಿನ ಶೀಗೇಹಳ್ಳಿ ಪಂಚಾಯಿತಿ ಪಿಡಿಒ ಅಂಬರೀಶ್ ಹಾಗೂ ಪಂಚಾಯಿತಿ ಅಧ್ಯಕ್ಷ ಮಂಜುಳಾ ಸುರೇಶ್ ಬಾಬು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನೋಟೀಜ್ ಜಾರಿ ಮಾಡಿದರು.