ದ್ವನಿಸುರುಳಿ ಬಿಡುಗಡೆ…

260

ಮಂಡ್ಯ/ಮಳವಳ್ಳಿ: ಡಾ.ಕೆ.ಅನ್ನದಾನಿ ರವರ ಕಂಠಸಿರಿಯ ಕರುಣಾಳು ಮಾದೇಶ್ವರ ಜಾನಪದ ಶೈಲಿಯ ಭಕ್ತಿಗೀತೆಗಳ ದ್ವನಿಸುರುಳಿ ಬಿಡುಗಡೆಯನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ರವರು ಇದೇ ಜೂ 25 ರಂದು ಮಳವಳ್ಳಿ ಪಟ್ಟಣದ ಸಕಾ೯ರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ನೇರವೇರಿಸಲಿದ್ದಾರೆ ಎಂದು ಮಾಜಿ ಶಾಸಕ ಡಾ.ಕೆ ಅನ್ನದಾನಿ ತಿಳಿಸಿದರು.ಮಳವಳ್ಳಿ ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಟಿ ಯಲ್ಲಿ ಮಾತನಾಡಿ, ಕಾಯ೯ಕ್ರಮ ದಲ್ಲಿ ಹಿರಿಯ ಕವಿ ಹಾಗೂ ಮಾಜಿ ವಿಧಾನಪರಿಷತ್ತು ಸದಸ್ಯ ಡಾ.ಸಿದ್ದಲಿಂಗಯ್ಯ, ಆಗಮಿಸಲಿದ್ದು, ಸುಧಾಬರಗೂರು ಮತ್ತು ತಂಡದವರಿಂದ ನಗೆಹಬ್ಬ. ಹಾಗೂ ಜೀ ಟಿವಿ ಸರಿಗಮಪ ಖ್ಯಾತಿಯ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆಎಂದರು. ಗೋಷ್ಠಿಯಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಹಾಗೂ ಜಿ.ಪಂ ಸದಸ್ಯ ರವಿ, ಮಾಲೇಗೌಡ, ನಂದಕುಮಾರ, ಮಾಜಿಪುರಸಭಾಧ್ಯಕ್ಷ ದೊಡ್ಡಯ್ಯ, ಪುರಸಭಾ ಸದಸ್ಯ ರಾಜಣ್ಣ ಇದ್ದರು.