ವಿಕಲಚೇತನರ ಪ್ರತಿಭಟನೆ.

338

ಬಳ್ಳಾರಿ /ಹೊಸಪೇಟೆ :ಸಮಾಜಿಕ ಭದ್ರತೆ
ಯೋಜನೆಯಡಿ ವಿಕಲಚೇತನರಿಗೆ,ವಯೋ ವೃದ್ದರಿಗೆ, ವಿಧವೆಯರಿಗೆ ನೀಡುವ ಮಾಸಿಕ ಪೋಷಣ ಭತ್ಯೆ ವಿಳಂಬವಾಗುತ್ತಿರುವುದನ್ನು ಖಂಡಿಸಿ ಇಲ್ಲಿನ ನವಸ್ಪೂರ್ತಿ ವಿಕಲಚೇತನರ ಸಂಘದ ಪದಾಧಿಕಾರಿಗಳು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿ ತಹಶಿಲ್ದಾರ್ ಕಚೇರಿ ಹಾಗೂ ಪ್ರಧಾನ ಅಂಚೆ ಕಛೇರಿಯ ಅದೀಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ನವಸ್ಪೂರ್ತಿ ವಿಕಲಚೇತನರ ಸಂಘದ ಮುಖಂಡ ಲೋಹಿತ್ ತಳವಾರ ಮಾತನಾಡಿ. ವಿಕಲಚೇತನರು, ವಯೋವೃದ್ದರು, ವಿಧವೆಯರಿಗೆ ಸರಿಯಾದ ಸಮಯಕ್ಕೆ ಪೋಷಣ ಭತ್ಯೆ ದೊರೆಯದೆ ಅಂಚೆ ಕಛೇರಿ ಗೆ ನಿತ್ಯವೂ ಅಲೆದಾಡುವ ಪರಿಸ್ಥಿತಿ ಒದಗಿದೆ. ತಕ್ಷಣವೇ ಈ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಮುಂದಿನದಿನಗಳಲ್ಲಿ ಅಂಚೆ ಕಛೇರಿ ಮತ್ತು ತಹಶಿಲ್ದಾರರ ಕಛೇರಿಯನ್ನು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತೇವೆ ಎಂದು ಅವರು ಹೇಳಿದರು.
ಸಂಘದ ಗೌರವಾಧ್ಯಕ್ಷ ಜೆ. ರವಿಕುಮಾರ ನಾಯಕ, ಕಾರ್ಯದರ್ಶಿ ಡಿ. ಶಿವಕುಮಾರ, ಉಪಾಧ್ಯಕ್ಷ ಭುವನೇಶ್ವರಿ, ಸದಸ್ಯರುಗಳಾದ ಉಮೇಶ, ಎಸ್. ಕೆ. ಉಮೇಶ್, ಅಂಜಿನಿ, ಮಂಜುನಾಥ, ಮಂಜುಳ, ರಿಜ್ವಾನ್, ಮೆಹಬೂಬ್, ವೆಂಕಮ್ಮ, ರೆಡ್ಡಿ ಅಕ್ಬರ್, ಹನುಮೇಶ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ತಹಸೀಲ್ದಾರ್ ಕಚೇರಿ ಅಽಕಾರಿ ರಮೇಶ್ ಅವರು ಮನವಿ ಪತ್ರ ಸ್ವೀಕರಿಸಿದರು.