ಶ್ರೀಗಳ ಆಶಯದಂತೆ ನನಗೆ ಸಚಿವ ಸ್ಥಾನ ನೀಡಿ

492

ಉಜ್ಜಯಿನಿ ಶ್ರೀಗಳ ಆಶಯದಂತೆ ನನಗೆ ಸಚಿವ ಸ್ಥಾನ ನೀಡಿದ್ರೆ ನಿಭಾಯಿಸಲು ಸಿದ್ದ- ಶಾಸಕ ಕಾಶಪ್ಪನವರ್​

ಬಾಗಲಕೋಟೆ : ಉತ್ತರ ಕರ್ನಾಟಕದಲ್ಲಿ ವೀರಶೈವರಿಗೆ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಉಜ್ಜಯಿನಿ ಶ್ರೀಗಳ ಇಂಗಿತದಂತೆ ಮಾನ್ಯ ಮುಖ್ಯಮಂತ್ರಿಗಳು ತಮಗೆ ಸಚಿವ ಸ್ಥಾನ ನೀಡಿದಲ್ಲಿ ನಿಭಾಯಿಸಲು ತಾನು ಸಿದ್ದನೆಂದು ಹುನಗುಂದದ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿದ್ರು.
ಅವರು ಬಾಗಲಕೋಟೆ ಜಿಲ್ಲೆಯ ಹಾವರಗಿಯಲ್ಲಿ ತಮ್ಮ ತಂದೆ ದಿ:ಎಸ್​.ಆರ್.ಕಾಶಪ್ಪನವರ 14ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಬಳಿಕ ಮಾತನಾಡಿದ್ರು. ಶಾಸಕ ವಿಜಯಾನಂದ ಕಾಶಪ್ಪನವರ ಅವರು ತಮ್ಮ ತಂದೆ ದಿವಂಗತ ಎಸ್​.ಆರ್.ಕಾಶಪ್ಪನವರ ಅವರ ಕಾರ್ಯವೈಖರಿ ಬಗ್ಗೆ ಮಾತನಾಡಿ ಅವರ ಪುಣ್ಯಸ್ಮರಣೆ ವೇಳೆ ಉಜ್ಜಯಿನಿಯ ಸಿದ್ದಲಿಂಗ ರಾಜದೇಶಿಕೇಂದ್ರ ಶ್ರೀಗಳು ಹಾಜರಿದ್ದು, ಈಗ ಕಾಂಗ್ರೆಸ್​ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಸಚಿವ ಸ್ಥಾನ ನೀಡುವುದಾದರೆ ಉತ್ತರ ಕರ್ನಾಟಕದ ವೀರಶೈವರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ತಮಗೆ ಸಚಿವ ಸ್ಥಾನ ನೀಡಲಿ ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಒಂದೊಮ್ಮೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಚಿವ ಸ್ಥಾನ ನೀಡಲು ಮುಂದಾದಲ್ಲಿ ಅದನ್ನು ನಿಭಾಯಿಸಲು ನಾನು ಸಿದ್ದ ಎಂದರು. ಆದರೆ ನಾನು ಸಚಿವ ಸ್ಥಾನ ಆಕಾಂಕ್ಷಿಯಲ್ಲ, ಶ್ರೀಗಳ ಹೇಳಿಕೆಯಂತೆ ಮಂತ್ರಿ ಸ್ಥಾನ ನೀಡುವುದಾದಲ್ಲಿ ನಿಭಾಯಿಸಲು ಸಿದ್ದ ಎಂದು ಹೇಳಿದ್ರು.