ಆದೇಶ ಪ್ರತಿ ವಿತರಣೆ

325

ಬಳ್ಳಾರಿ /ಹೊಸಪೇಟೆ : ತಾಲೂಕಿನ ಕಮಲಾಪುರ ಪಟ್ಟಣದಲ್ಲಿ ಪಂಚಾಯತಿ ವತಿಯಿಂದ ಮನೆ ಮಂಜೂರತಿ ಕಾಮಗಾರಿ ಮತ್ತು ಸ್ವಚ್ಛಭಾರತ ಮಿಷನ್ ಯೋಜನೆ ಅಡಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಗುರುವಾರ ಆದೇಶ ಪ್ರತಿಯನ್ನು ವಿತರಿಸಲಾಯಿತು. ಪಟ್ಟಣದಲ್ಲಿ ಒಟ್ಟು 150ಕ್ಕೂ ಹೆಚ್ಚುವರಿ ಮನೆಗಳು ಮತ್ತು 950 ಶೌಚಲಯದ ನಿರ್ಮಾಣಕ್ಕೆ ಯೋಜನೆ ರೂಪಿಸಿಕೊಳ್ಳಲಾಗುತ್ತಿದ್ದು ಪ್ರಸ್ತುತ 47ಜನಕ್ಕೆ ಆದೇಶ ಪ್ರತಿಯನ್ನು ನೀಡಲಾಗಿದೆ ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಶಿವುಕುಮಾರ ಕಟ್ಟಿಮನಿ ತಿಳಿಸಿದ್ದಾರೆ. ಯೋಜನೆಗಳು ನೇರವಾಗಿ ಫಲಾನುಭವಿಗಳ ಕೈ ಸೇರಬೇಕು ಎಂದು 14ನೇ ವಾರ್ಡ್‍ನಲ್ಲಿರುವ ಫಲಾನುಭವಿಗಳ ಮನೆ ಮನೆಗೆ ಸಿಬ್ಬಂದಿಗಳು ತೆರಳಿ ಕಾಮಗಾರಿ ಆದೇಶ ಪ್ರತಿಗಳನ್ನು ವಿತರಿಸಿದರು. ಪಂಚಾಯತಿ ಅಧ್ಯಕ್ಷ ಬಿ.ಆರ್ ಮಳಲಿ, ಸದಸ್ಯರಾದ ಗೋಪಾಲ್, ಗೋಪಣ್ಣ ಸೇರಿದಂತೆ ಸಿಬ್ಬಂದಿ ಬಿಲಾಲ್ ಬಾಷ, ಇತರರು ಇದ್ದರು.