“ಕೈ” ಕೊಟ್ಟ ಸದಸ್ಯರು..!

608

ಬಳ್ಳಾರಿ /ಹೊಸಪೇಟೆ ಕಂಪ್ಲಿ :
ಕಾಂಗ್ರೆಸ್ ಪಕ್ಷದ ಎಂಟು ಜನ ಸದಸ್ಯರು ಬಿಜೆಪಿ ಸೇರ್ಪಡೆಯಾಗುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಪುರಸಭೆ ಅಧ್ಯಕ್ಷ ಗದ್ದುಗೆ ಕಾಂಗ್ರೆಸ್ ಪಕ್ಷಕ್ಕೆ ಆಗಬೇಕಾಗಿತ್ತು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ ಮತ್ತು ಕಂಪ್ಲಿ ಪುರಸಭೆ ಅಧ್ಯಕ್ಷ ಚುನಾವಣಾ ವೀಕ್ಷಕ ವೆಂಕಟರಾವ ಘೋರ್ಪಡೆಯವರು ಬೇರೆ ಪಕ್ಷಕ್ಕೆ ಬೆಂಬಲಿಸಿದ ಕಾರಣ ಅಧ್ಯಕ್ಷ ಗದ್ದುಗೆ ಕಾಂಗ್ರೆಸ್ ಪಕ್ಷಕ್ಕೆ ಸೋಲು.ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದ ೮ಜನ ಸದಸ್ಯರನ್ನು ಉಚ್ಚಾಟಿಸುವವರೆಗೆ ಬಿಡುವುದಿಲ್ಲ ಎಂದು ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ಹನುಮಂತ ಆಕ್ರೋಶ ವ್ಯಕ್ತಪಡಿಸಿದರು.