ಅಭಿವೃದ್ಧಿಯೊಂದಿಗೆ ಅನುಕೂಲ ಮಾಡಿಕೊಡಿ

427

ಬಳ್ಳಾರಿ /ಹೊಸಪೇಟೆ: ತಾಲ್ಲೂಕಿನ ಐತಿಹಾಸಿಕ ಕಮಲಾಪುರ ಕೆರೆಯ ತೂಬಗಳನ್ನು ಸಂರಕ್ಷಣೆ ಮಾಡುವುದು ಸೇರಿದಂತೆ ಫೆನ್ಸಿಂಗ್ ಕಾಮಗಾರಿ ನಡುವೆ ರೈತರ ವಾಹನಗಳ ಓಡಾಟಕ್ಕೆ ರಸ್ತೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿ, ಕಮಲಾಪುರ ರೈತ ಸಂಘದ ಮುಖಂಡರು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಹಂಪಿ ಕಿರು ವಲಯದ ಅಧೀಕ್ಷಕ ಪುರಾತತ್ವ ವಿಧರರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸುಪರ್ಧಿಗೆ ಬರುವ ವಿಜಯನಗರ ಅಳರಸರ ಕಾಲದ ಐತಿಹಾಸಿಕ ಕೆರೆಯ ತೂಬಗಳನ್ನು ದುರಸ್ಥಿ ಮಾಡುವ ಮೂಲಕ ಕೆರೆಯ ಹೂಳೆತ್ತಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಹಾಯ ಅಭಿಯಂತರ ತೇಜಸ್ವಿ, ರೈತ ಮುಖಂಡ ಪ್ರಶಾಂತ್ ಸಿಂಗ್, ಜೋಗಯ್ಯ, ಯಂಕಪ್ಪ, ಅಂಗಡಿ ನಾಗರಾಜ, ಸಮಿವುಲ್ಲಾ ಹಾಗೂ ಪಟ್ಟಣ ಪಂಚಾಯ್ತಿ ಸದಸ್ಯರಾದ ಮೆಹಬೂಬು ಬಾಷಾ, ಶಿವರಾಮ ಹಾಗೂ ಎಪಿಎಂಸಿ.ಸದಸ್ಯ ಸೋಮಶೇಖರ ಮತ್ತು ಶರಣಪ್ಪ ಇತರರು ಇದ್ದರು.