ರಾಜಕುಮಾರ ಚಿತ್ರ ಎತ್ತಂಗಡಿಗೆ ಅಭಿಮಾನಿಗಳ ಆಕ್ರೋಶ

345

ಚಾಮರಾಜನಗರ/ಕೊಳ್ಳೇಗಾಲ:ರಾಜಕುಮಾರ್ ಕನ್ನಡ ಚಿತ್ರವನ್ನು  ಎತ್ತಂಗಡಿಗೊಳಿಸಿ ಹಿಂದಿ ಚಲನಚಿತ್ರ ಪ್ರದಶ೯ನಕ್ಕೆ ಸಜ್ಜಾಗಿದ್ದ ಚಲನಚಿತ್ರದ
ಮಾಲೀಕರೊಬ್ಬರು ಕೊನೆಗೂ ಅಭಿಮಾನಿಗಳ ಒತ್ತಡಕ್ಕೆ ಮಣಿದು  ಹಿಂದಿ ಚಿತ್ರ ಪ್ರದಶ೯ನಕ್ಕೆ ಪುಲ್ ಸ್ಟಾಪ್ ಹಾಕಿ  ಪುನಃ ಕನ್ನಡ ಚಿತ್ರ
ಪ್ರದಶ೯ನಕ್ಕೆ ಮುಂದಾದ  ಘಟನೆ ಪಟ್ಟಣದಲ್ಲಿ ಜರುಗಿದೆ.
ಕೊಳ್ಳೇಗಾಲದ ಶೋಭಾ ಚಿತ್ರ ಮಂದಿರದಲ್ಲಿ ನಟ ಪುನೀತ್ ರಾಜ್ಕುಮಾರ್ ಅಭಿನಯದ ರಾಜಕುಮಾರ ಚಿತ್ರ ಉತ್ತಮ ರೀತಿಯಲ್ಲಿ ಪ್ರದಶ೯ನ ಕಾಣುತ್ತಿದ್ದು
ಗುರುವಾರಕ್ಕೆ 90ದಿನ ಪೂಣ೯ಗೊಂಡಿದೆ.  ಈಹಿನ್ನೆಲೆ ಚಲನಚಿತ್ರಮಾಲೀಕರು ಚಿತ್ರ ಎತ್ತಂಗಡಿ ಮಾಡಿ ಟ್ಯೂಬ್ ಲೈಟ್ ಎಂಬ ಹಿಂದಿ ಚಿತ್ರ ಪ್ರದಶ೯ನಕ್ಕೆ
ಅಣಿಯಾಗಿ ರಾಜ್ ಕುಮಾರ್ ಚಿತ್ರ ಎತ್ತಂಗಡಿಗೆ ಮುಂದಾಗಿದ್ದರು.
ಮಾತ್ರವಲ್ಲ ಶುಕ್ರವಾರದಿಂದ ಟ್ಯೂಬ್ ಲೈಟ್ ಪ್ರದಶ೯ನ ಕಾಣಲಿದೆ ಎಂಬ ಪೋಸ್ಟರ್ ಗಳನ್ನು ಎಲ್ಲೆಡೆ ಪ್ರಕಟಿಸಿದ್ದರು ಚಿತ್ರ ನೂರು ದಿನ ಪ್ರದಶ೯ನಕ್ಕೆ  ಕೆಲವು ಅಡ್ಡಿ ಆತಂಕಗಳಿವೆ,
ಆಗಾಗಿ ಚಿತ್ರವನ್ನು ಎತ್ತಂಗಡಿ  ಮಾಡುವ ಷಡ್ಯಂತ್ಯ ರೂಪಿಸಲಾಗಿದೆ ಎಂದು ಆರೋಪಿಸಿದ  ಹಲವು ಪುನೀತ್  ಅಭಿಮಾನಿಗಳು ಈಸಂಬಂಧ ಆಕ್ರೋಶ ವ್ಯಕ್ತಪಡಿಸಿದರು.
ಈಹಿನ್ನೆಲೆ ಪೊಲೀಸರ ಪ್ರವೇಶವೂ ಆಯಿತು. ವಿತರಕರ ಜೊತೆ ದೂರವಾಣಿ ಜೊತೆ ಮಾತುಕತೆ ಬಳಿಕ ವಿತರಕರೂ ನಮ್ಮದೇನೂ ತಪ್ಪಿಲ್ಲ
ಎಂದು ಸಮಥಿ೯ಸಿಕೊಂಡಿದ್ದಾರೆ.  ಈ ಮದ್ಯೆ ಇನ್ನು 9ದಿನ ಚಿತ್ರ ಪ್ರದಶಿ೯ಸಿ ಅದಕ್ಕೆ ತಗಲುವ ಖಚು೯ ನಾವು ಭರಿಸುತ್ತೆವೆ ಎಂದು  ಕೆಲವು ಅಭಿಮಾನಿಗಳು
ಸಹಾ ಮನವಿ ಮಾಡಿದ್ದರೆ. ಅಲ್ಲದೆ ಯಾವುದೆ ಕಾರಣಕ್ಕೂ ಚಿತ್ರ ಶತದಿನೋತ್ಸವ ಪ್ರದಶ೯ನ ಕಾಣಬೇಕು, ಯಾವುದೆ ಕಾರಣಕ್ಕೂ ಎತ್ತಂಗಡಿ ಅವಕಾಶ ನೀಡುವುದಿಲ್ಲ
ಎಂದು ರಾಜೇಶ್, ಪ್ರಭು ಸೇರಿದಂತೆ ಹಲವು ಅಭಿಮಾನಿಗಳ ಪಟ್ಟು ಹಿಡಿದು ಪ್ರತಿಭಟಿಸಿದ  ಹಿನ್ನೆಲೆ ಒತ್ತಡಕ್ಕೆ ಚಿತ್ರ ಮಂದಿರದ ಮಾಲೀಕರು ಮಣಿದಿದ್ದಾರೆ.
ಹಿನ್ನೆಲೆ  ಶುಕ್ರವಾರ ಬೆಳಗ್ಗೆ    ಪ್ರದಶ೯ವಾಗಬೇಕಿದ್ದ  ಹಿಂದಿ ಚಿತ್ರ ಪ್ರದಶ೯ನ ಕಾಣಲಿಲ್ಲ, ಎಂದಿನಂತೆ ರಾಜಕುಮಾರ್ ಚಿತ್ರ ಪ್ರದಶ೯ನ ನಡೆಯುತ್ತಿದೆ.   ಶೋಭ ಚಿತ್ರ
ಮಂದಿರದಲ್ಲಿ ಇನ್ನು 9ದಿನ ಚಿತ್ರ ಪ್ರದಶ೯ನ ಕಾಣಲಿದೆ.  ಚಿತ್ರ ಶತದಿನೋತ್ಸವ ಕಾಣಲಿದೆ ಎಂಬುದು ಅಭಿಮಾನಿಗಳ ಅಭಿಲಾಷೆಯಾಗಿದೆ.
ಏತನ್ಮದ್ಯೆ ಅಭಿಮಾನಿಗಳು ಹಿಂದಿ ಚಿತ್ರದ ಪೋಸ್ಟರ್ ತೆರವಿಗೆ ಪಟ್ಟುಹಿಡಿದರಲ್ಲದೆ ರಾಜಕುಮಾರ್ ಚಿತ್ರದ ಪೋಸ್ಟರ್ ಅಳವಡಿಕೆ ವರೆವಿಗೂ
ಪಟ್ಟು ಹಿಡಿದು ಗುರುವಾರ ರಾತ್ರಿ ಕಾದು ಕುಳಿತುಕೊಳ್ಳುವ ಮೂಲಕ  ಪುನೀತ್ ಅಭಿಮಾನಿಗಳು ಗಮನ  ಸೆಳೆದರು.
ರಾಜಕುಮಾರ್  ಚಿತ್ರ ನೂರು ದಿನ ಪ್ರದಶ೯ನ ಕಾಣಬೇಕು,   ಉತ್ತಮ ರೀತಿಯಲ್ಲಿ ಈಗ ಚಿತ್ರ  ಪ್ರದಶ೯ನ ಕಾಣುತ್ತಿದ್ದರೂ ಎತ್ತಂಗಡಿಗೆ ಯತ್ನ ನಡೆದಿತ್ತು,
ಆಗಾಗಿ ಬೇರೆ ಚಿತ್ರ ಪ್ರದಶಿ೯ಸದಂತೆ  ಪ್ರತಿಭಟಿಸಿದ ಹಿನ್ನೆಲೆ  ಇಂದು ಪ್ರದಶ೯ನವಾಗಬೇಕಿದ್ದ ಹಿಂದಿ ಚಿತ್ರ ಪ್ರದಶ೯ನವಾಗಲಿಲ್ಲ,
ಇನ್ನು ಸಹಾ ರಾಜ್ ಕುಮಾರ್  9 ದಿನ ಚಿತ್ರ ಪ್ರದಶ೯ನವಾಗಲಿದೆ  ಎಂದು   ಶಿವರಾಜ್ ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಪ್ರಭು ಪತ್ರಿಕೆಗೆ ತಿಳಿಸಿದರು.