ಪೂರ್ವಭಾವಿ ಸಭೆ…

275

ಮಂಡ್ಯ/ಮಳವಳ್ಳಿ: ಇದೇ ಜೂ 27 ರಂದು ನಡೆಯಲಿರುವ ನಾಡ ಪ್ರಭು ಕೆಂಪೇಗೌಡರವರ ಜಯಂತ್ಯೋತ್ಸವ ಅಂಗವಾಗಿ ತಹಸೀಲ್ದಾರ್ ದಿನೇಶ್ ಚಂದ್ರ ಅಧ್ಯಕ್ಷತೆ ಯಲ್ಲಿ ಮಳವಳ್ಳಿ ತಾಲ್ಲೂಕು ಕಚೇರಿಯ ಸಂಕೀರ್ಣ ಕಟ್ಟಡ ದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಕುಮಾರ್ ಮಾತನಾಡಿ ಜಯಂತಿಗಳನ್ನು ಪ್ರತ್ಯೇಕ ವಾಗಿ ಮಾಡುವ ಬದಲು ಒಂದೇ ದಿನ ಎಲ್ಲರ ಜಯಂತಿ ಮಾಡುವಂತೆ ಸಕಾ೯ರ ಒತ್ತಾಯ ಈ ಮೂಲಕ ಮಾಡುತ್ತೇನೆ ಎಂದರು. ತಹಸೀಲ್ದಾರ್ ದಿನೇಶ್ ಚಂದ್ರ ಮಾತನಾಡಿ , ಸಕಾ೯ರ ದ ಆದೇಶ ನಿನ್ನೆಯಷ್ಟೆ ಬಂದಿದ್ದು ಯಾವುದೇ ಅನುದಾನದ ಬಗ್ಗೆ ಮಾಹಿತಿ ಇಲ್ಲ, ಸಂಘಸಂಸ್ಥೆಗಳ. ಸಹಕಾರದಿಂದ ಜಯಂತಿ ಆಚರಣೆ ಮಾಡಬೇಕು ಎಂದು ತಿಳಿಸಿದರು. ಸಭೆಯಲ್ಲಿ ಜಾತಿ ಸೀಮಿತವಾದ ಜಯಂತಿ ಮಾಡುವ ಬಗ್ಗೆ ಸಕಾ೯ರ ಕ್ಕೆ ನಿರ್ಣಯವನ್ನು ತಿಳಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆರ್.ಎನ್ ವಿಶ್ವಾಸ್.ಉಪಾಧ್ಯಕ್ಷ ಮಾಧು, ಪುರಸಭಾಧ್ಯಕ್ಷ ರಿಯಾಜಿನ್, ಎಪಿಎಂಸಿ ಅಧ್ಯಕ್ಷ ಅಂಬರೀಷ್, ಜಿ.ಪಂಸದಸ್ಯ ಹನುಮಂತು, ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ತಾ.ಪಂ ಸದಸ್ಯ ನಾಗೇಶ್ , ಸೇರಿದಂತೆ ಮತ್ತಿತ್ತರರು ಇದ್ದರು.