ರಂಜಾನ್ ಹಬ್ಬದ ಪ್ರಯುಕ್ತ ನೀರು ಸರಬರಾಜು…

313

ಬಳ್ಳಾರಿ:ರಂಜಾನ್ ಹಬ್ಬದ ಪ್ರಯುಕ್ತ 15ಟ್ಯಾಂಕರ್ ಗಳ ಮೂಲಕನೀರು ಸರಬರಾಜು:ನಲ್ವಡಿ
ರಂಜಾನ್ ಹಬ್ಬದ ಪ್ರಯುಕ್ತ ನಗರದಲ್ಲಿ 15ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಎಂ.ಕೆ.ನಲ್ವಡಿ ಅವರು ತಿಳಿಸಿದ್ದಾರೆ. ಹಬ್ಬದ ಸಂದರ್ಭದಲ್ಲಿ ನೀರಿನ ಸಮಸ್ಯೆ ಉದ್ಭವಿಸಬಾರದು ಎಂಬ ದೃಷ್ಟಿಯಿಂದ ಪಾಲಿಕೆ ಈ ನಿರ್ಧಾರ ಕೈಗೊಂಡಿದೆ. ನೀರಿನ ಸಮಸ್ಯೆ ಉದ್ಭವಿಸಿದ್ದಲ್ಲಿ ಪಾಲಿಕೆಯನ್ನು ತಕ್ಷಣ ಸಂಪರ್ಕಿಸಲು ನಗರದ ನಾಗರಿಕರಲ್ಲಿ ಮನವಿ ಮಾಡಿರುವ ಪಾಲಿಕೆ ಆಯುಕ್ತ ನಲ್ವಡಿ ಅವರು ನಗರದಲ್ಲಿ ನೀರಿನ ಸಮಸ್ಯೆ ಉದ್ಭವಿಸದಂತೆ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.