ಅಧಿಕಾರಕ್ಕೆ ಬಂದರೆ ಶಾಶ್ವತ ನೀರಾವರಿ ಯೋಜನೆ..

273

ಕೋಲಾರ ; ಬಂಗಾರಪೇಟೆ ;ಬಿಜೆಪಿ‌ ಅಧಿಕಾರಕ್ಕೆ ಬಂದರೆ ಶಾಶ್ವತ ನೀರಾವರಿ ಯೋಜನೆ : ಯಡಿಯೂರಪ್ಪ ಈ ಭಾಗದ ಜನರಿಗೆ ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡಲು ಪ್ರಾಮಾಣಿಕ ಪ್ರಯತ್ನ. ಜಿಲ್ಲೆಯಲ್ಲಿ ಬರ ಪರಿಹಾರ ಇದುವರೆಗೂ ರೈತರ ಖಾತೆಗಳಿಗೆ ಜಮಾ ‌ಮಾಡಿಲ್ಲ‌. ಈಗಾಗಲೆ ರಾಜ್ಯದ ೨೪ ಜಿಲ್ಲೆಗಳಲ್ಲಿ ಪ್ರವಾಸ. ಷರತ್ತುಗಳಿಲ್ಲದೆ ರೈತರ ಸಾಲ ‌ಮನ್ನಾ ಮಾಡುವಂತೆ ಒತ್ತಾಯ. ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೆ. ಸಂಪರ್ಕ ಅಭಿಯಾನದ ವೇಳೆ ಬಂಗಾರಪೇಟೆ ಪಟ್ಟಣದಲ್ಲಿ ಸುದ್ದಿ ಗೋಷ್ಠಿ ಯಲ್ಲಿ ಹೇಳಿಕೆ. ನಮ್ಮ ಪಕ್ಷದಲ್ಲಿ ಯಾವುದೆ ರೀತಿಯ ಗುಂಪು ಗಾರಿಕೆ ಇಲ್ಲ, ಅದು ಕಾಂಗ್ರೇಸ್ ಮತ್ತು ಜೆಡಿಎಸ್ ನಲ್ಲಿದೆ. ಕೋಲಾರದಲ್ಲಿ ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೆ. ಮುಂದಿನ ಚುನಾವಣೆ ಕಾಂಗ್ರೇಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ಇದೆ.ಕೇಂದ್ರ ಸಚಿವ ಸದಾನಂದಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ಶಾಕರಾದ ವೈ.ಎ.ಎನ್, ಡಿ.ಎಸ್.ವೀರಯ್ಯ, ಸೋಮಣ್ಣ ಇತರರು ಉಪಸ್ಥಿತರಿದ್ದರು.