ಬೀಜದುಂಡೆ ಮತ್ತು ಸಸಿ ಬಿತ್ತನೆ ಅಭಿಯಾನ.

394

ಚಾಮರಾಜನಗರ/ಕೊಳ್ಳೇಗಾಲ:2017ರಲ್ಲಿ ಅರಣ್ಯ ಇಲಾಖೆ ನೀರಿಗಾಗಿ ಅರಣ್ಯ ಎಂದು ಘೋಷಿಸಿರುವ ಹಿನ್ನೆಲೆ ಬೀಜದುಂಡೆ ನಿರ್ಮಾಣ ಮತ್ತು ಸಸಿ ಬಿತ್ತನೆ ಅಭಿಯಾನಕ್ಕೆ ಭಾನುವಾರ ಬೆಳಗ್ಗೆ ಡಿಸಿಎಫ್ ಮಾಲತಿ ಪ್ರಿಯಾ ಚಾಲನೆ ನೀಡಿದರು.

ಮಹದೇಶ್ವರ ವನ್ಯಜೀವಿ ವಿಭಾಗದ ಕೊಳ್ಳೇಗಾಲ ಬಫರ್ ಜೋನ್ ವಲಯದ  ಮರಡಿಗುಡ್ಡದಲ್ಲಿ ನಡೆದ ಈ ಅಭಿಯಾನದಲ್ಲಿ  ಶಾಲಾ ಮಕ್ಕಳಿಂದ ಬೀಜದುಂಡೆ
ತಯಾರಿಸುವ ಕಾರ್ಯಕ್ರಮದಲ್ಲಿ  ವಿವಿಧ ಶಾಲೆಯ  ಸುಮಾರು 50ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ಬೀಜ ತಯಾರಿಕೆಯಲ್ಲಿ ತೊಡಗಿಸಿಕೊಂಡು ಗಮನ ಸೆಳೆದರು.
ಈ ಸಂದರ್ಭದಲ್ಲಿ ನಾಗರೀಕರು, ಹಾಗೂ ಸಂಘ ಸಂಸ್ಥೆಗಳ ಮುಖಂಡರು, ರೈತರುಗಳಿಗೆ ನೂರಾರು ಸಸಿಗಳನ್ನು  ವಿತರಿಸಲಾಯಿತು.

ಡಿಸಿಎಪ್ ಮಾಲತಿಪ್ರಿಯಾ ಮಾತನಾಡಿ ಪ್ರತಿಯೊಬ್ಬರು ಅರಣ್ಯದ ಅರಿವು ಮೂಡಿಸುವ ಹಾಗೂ ಅರಣ್ಯ ಸಂರಕ್ಷಿಸುವ ಹಿನ್ನೆಲ.

ವಿವಿಧ ಸಸಿಗಳನ್ನು ಇಂದು ನೀಡಲಾಗುತ್ತಿದೆ.  ಅದೇ ರೀತಿಯಲ್ಲಿ ಅರಣ್ಯ ಸಮೖದ್ದಿಗಾಗಿ ಬೀಜದುಂಡೆ ತಯಾರಿಸಲಾಗುತ್ತಿದೆ. ಇದಕ್ಕೆ
ಎಲ್ಲರ ಸಹಕಾರ ಅಗತ್ಯ ಎಂದರು.   ವಲಯ ಅರಣ್ಯಾಧಿಕಾರಿ ಮುತ್ತೆಗೌಡ, ಉಪ ಅರಣ್ಯಾಧಿಕಾರಿ ಬೋಜಪ್ಪ, ಗಾಡ್೯ ಶ್ರೀಧರ್ ಇನ್ನಿತರರು ಇದ್ದರು.