ಮಾನವೀಯ ಮೌಲ್ಯವುಳ್ಳವರೇ ಮುಂದಿನ ಜೆಡಿಎಸ್ ಅಭ್ಯರ್ಥಿ

324

ಚಾಮರಾಜನಗರ/ಕೊಳ್ಳೇಗಾಲ:ಲೋಕೇಶ್ ಮೌರ್ಯ ಅವರೇ ಹನೂರು ವಿಧಾನಸಭಾ ಕ್ಷೇತ್ರಕ್ಕೆ  ಮುಂದಿನ ಜೆಡಿಎಸ್ ಪಕ್ಷದ ಅಭ್ಯಥಿ೯ ಎಂದು ಜಿಲ್ಲಾಧ್ಯಕ್ಷ ಕಾಮರಾಜು ತಿಳಿಸಿದರು. .
ಅವರು ತಾಲೂಕಿನ ಹನೂರು ಕ್ಷೇತ್ರ ವ್ಯಾಪ್ತಿಯ ಕೌಡಿಹಳ್ಳ ಡ್ಯಾಂ ಗಿರಿಜನ ಹಾಡಿಯ ಜನರಿಗೆ ಬಟ್ಟೆ ವಿತರಿಸಿ ಮಾತನಾಡಿ ಲೋಕೇಶ್ ಮೌಯ೯ ಅವರು ಮಾನವೀಯ ಮೌಲ್ಯವುಳ್ಳವರು,ಅವರಲ್ಲಿ ಸಾಮಾಜಿಕ ಕಳಕಳಿ ಇದೆ. ಆದ್ದರಿಂದಲೇ ಅವರು ಗಿರಿಜನರೇ ವಾಸಿಸುವ ಅಧ೯ನಾರೀಪುರದ ಒಂಬತ್ತಕ್ಕೂ ಹೆಚ್ಚು ಕುಟುಂಬಕ್ಕೆ ತಮ್ಮ ಸ್ವಂತ ಖಚಿ೯ನಲ್ಲಿ ವಿದ್ಯುತ್ ಸೌಲಭ್ಯ ಕಲ್ಪಿಸಿದ್ದಾರೆ. ಹೊಸಪೋಡು ಗ್ರಾಮದಲ್ಲಿ ಆರ್ಥಿಕ ಸಮಸ್ಯೆಯಿಂದ ವಿದ್ಯೆಯಿಂದ ವಂಚಿತ ಗೊಂಡಿದ್ದ ಮೂರುಕುಟುಂಬಕ್ಕೆ ನೆರವು ನೀಡಿದ್ದಾರೆ. ನೆಲ್ಲಿಕತ್ರಿ ಹಾಡಿಯ ಗಿರಿಜನರಿಗೆ ಸೋಲಾರ್ ದೀಪ ವಿತರಿಸಿ ಗ್ರಾಮದ ಅಭಿವೖದ್ದಿಗಾಗಿ ಗ್ರಾಮ ದತ್ತು ಪಡೆದಿದ್ದಾರೆ. ಇಂದು ನಿಮ್ಮ ಹಳ್ಳಿಯಲ್ಲಿ ಬಟ್ಟೆ ವಿತರಣಾ ಕಾಯ೯ಕ್ರಮ ಹಮ್ಮಿಕೊಂಡಿದ್ದಾರೆ ಎಂದರು.

ಲೋಕೇಶ್ ಅವರು ಸ್ವಂತ ಖಚಿ೯ನಲ್ಲಿ ಮಾಟ೯ಳ್ಳಿ ಭಾಗದಲ್ಲಿ ನೀರಿನ ಸಮಸ್ಯೆ ಅರಿತು ಲಕ್ಷಾಂತರ ರೂಗಳನ್ನು ಭರಿಸಿ ಟ್ಯಾಂಕರ್ ಮೂಲಕ ಒಂದುತಿಂಗಳು
ನೀರು ಪೂರೈಸುವ  ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಶಾಸಕರಿಗೆ ಕ್ಷೇತ್ರದ ಸಮಸ್ಯೆ ಬಗ್ಗೆ ಅರಿವಿಲ್ಲ-
ಕ್ಷೇತ್ರದ ಶಾಸಕರಾದ ನರೇಂದ್ರ ಅವರಿಗೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅರಿವಿಲ್ಲ, ಅದರಲ್ಲೂ ಗಿರಿಜನರ ಬಗ್ಗೆ ಕಾಳಜಿ ಇಲ್ಲ ಎಂದು ಟೀಕಿಸಿದರಲ್ಲದೆ ಅವರ ತಂದೆ ದಿ.ರಾಜೂಗೌಡ ಅವರಿಗೆ ಕ್ಷೇತ್ರದ ಅಭಿವೖದ್ದಿ ಮತ್ತು ಗಿರಿಜನರ ಬಗ್ಗೆ ಕಾಳಜಿ ಇತ್ತು ಎಂದು ವ್ಯಾಖ್ಯಾನಿಸಿದ ಅವರು 2ಕುಟುಂಬಳ ರಾಜಕೀಯಕ್ಕೆ ಅಂತ್ಯ ಹಾಡಲು ಜನತೆ 3ನೇ ಶಕ್ತಿಯಾದ ಲೋಕೇಶ್ ಅವರನ್ನು
ಮುಂದಿನ ಚುನಾವಣೆಯಲ್ಲಿ ಬೆಂಬಲಿಸಬೇಕು,  ಕ್ಷೇತ್ರದ ಜನರ ಮತ ಪಡೆದು ಹಲವಾರು ವಷ೯ಗಳ ಆಳಿದ 2ಕುಟುಂಬಗಳ ರಾಜಕೀಯ ಮುಖಂಡರು ಸಹಾ ಈ ಭಾಗದ ಜನರಿಗೆದ್ರೋಹ ಮಾಡಿದ್ದಾರೆ. ಅಂತಹ ಅಭಿವೖದ್ದಿ ಕಾಯ೯ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜೆಡಿಎಸ್ ಮುಖಂಡ ಲೋಕೇಶ್ ಮೌಯ೯ ಮಾತನಾಡಿ ನನ್ನ ಕೈಲಾದ ಮಟ್ಟಿಗೆ ಸಾಮಾಜಿಕ ಕಳಕಳಿಯಿಟ್ಟು ಸೇವೆ ಮಾಡುತ್ತಿದ್ದೆನೆ.
ಈಗ್ರಾಮದ ದೇವಾಲಯಕ್ಕೆ ಅಗತ್ಯ ಸಾಮಗ್ರಿ ಕೊಡಿಸುತ್ತೆನೆ. ಗ್ರಾಮದಲ್ಲಿ ಸಂಕಷ್ಟದಲ್ಲಿರುವವರಿಗೆ  ತಮ್ಮ ಕೈಲಾದ ನೆರವು   ನೀಡುತ್ತೆನೆ, ಬೇರೆ ರಾಜಕೀಯ ವ್ಯಕ್ತಿಗಂತೆ ನಾನು ಪೊಳ್ಳು ಭರವಸೆ ನೀಡುವುದಿಲ್ಲ, ನಾನು ಹೇಳಿದ್ದನೂ ಮಾಡಿಯೇ ತೀರುತ್ತೆನೆ ಎಂದರು.
ಇದೇ ಸಂದಭ೯ದಲ್ಲಿ ಲೋಕೇಶ್ ಮೌಯ೯ ಅವರು ದೇವಾಲಯಕ್ಕೆ ಅಗತ್ಯ ಸಾಮಗ್ರಿ ಖರೀದಿಗಾಗಿ ಗ್ರಾಮದ ಯಜಮಾನರ  ಬಳಿ 15ಸಾವಿರ ನೆರವು ನೀಡಿದರು.
ಈಸಂದಭ೯ದಲ್ಲಿ  ಹಾಲು ಮತ ಮಹಾಸಭಾ ರಾಜ್ಯ ಸಂಚಾಲಕ ವೆಂಕಟೇಶಮೂತಿ೯, ಕುರಿ ಮತ್ತು ಹೆಣ್ಣೆ ಸೂಸೈಟಿಯ ಅಧ್ಯಕ್ಷ ಆನಂದ್, ಪಿಜಿಪಾಳ್ಯ ಗ್ರಾಪಂ ಉಪಾಧ್ಯಕ್ಷ ಸಿದ್ದರಾಜು,ಪರಿಸರಪ್ರೇಮಿ ಕೖಷ್ಣಮೂತಿ೯,  ಬಾಳಗುಣಸೆ ಮಂಜುನಾಥ್,  ಜಿನಕನಹಳ್ಳಿ ಶ್ರೀನಿವಾಸ್,  ಸಿದ್ದೆಗೌಡ, ಪುಟ್ಟೆಗೌಡ. ಮಾದೇಗೌಡ, ಲಿಂಗರಾಜು ಇನ್ನಿತರರು ಇದ್ದರು