ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ.

257

ಬೆಂಗಳೂರು/ಮಹದೇವಪುರ: ಎಂವಿಜೆ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ.

ಕಾಲೇಜು ಆಡಳಿತ ಮಂಡಳಿ ವಿರುದ್ದ ಅಕ್ರೋಶ ವ್ಯಕ್ತಪಡಿಸಿದ ಲೋಕೇಶ್ ತಂದೆ ಈರಣ್ಣ.
ಕಾಲೇಜಿನ ಆಡಳಿತ ಮಂಡಳಿಯವರ ಒಳಜಗಳದಿಂದ ವಿದ್ಯಾರ್ಥಿಗಳಿಗೆ ಹಾಲ್ ಟಿಕೇಟ್ ನೀಡದ ಕಾರಣ ವಿದ್ಯಾರ್ಥಿಗಳು ಕಳೆದ ೨೦ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು.

ಇಂದು ಲೋಕೇಶ್ ನಾಲ್ಕನೇ ಸೆಮಿಸ್ಟರ್ ಪರೀಕ್ಷೆ ಬರೆಯಬೇಕಿದ್ದು ಹಾಲ್ ಟಿಕೇಟ್ ನೀಡದ ಕಾರಣ ನೇಣಿಗೆ ಶರಣಾಗಿದ್ದಾನೆ.ಮೃತ ವಿದ್ಯಾರ್ಥಿ ಲೋಕೇಶ್ ಈರಣ್ಣ ಹಾಗೂ ಅಂಜಿನಮ್ಮ ದಂಪತಿಗಳಿಗೆ ಒಬ್ಬನೆ ಮಗನಾಗಿದ್ದು ಪೋಷಕರ ರೋದನೆ ಮುಗಿಲುಮುಟ್ಟಿದೆ.

ವೈಟ್ ಪೀಲ್ಡ್ ನ ವೈದೇಹಿ ಆಸ್ಪತ್ರೆಯಲ್ಲಿ ಲೋಕೇಶ್ ಶವದ ಮರಣೋತ್ತರ ಪರೀಕ್ಷೆ.ಇಲ್ಲಿಯ ತನಕ ಕಾಲೇಜಿನ ಆಡಳಿತ ಮಂಡಳಿಯವರು ಘಟನೆ ಬಗ್ಗೆ ಯಾವುದೆ ಪ್ರತಿಕ್ರಿಯೆ ನೀಡದೆ, ಪೋಷಕರನ್ನು ಬೇಟಿ ಮಾಡದೆ ಇರುವುದು ಕೆಲ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಎಂವಿಜೆ ಕಾಲೇಜು ಆಡಳಿತ ಮಂಡಳಿ ವಿರುದ್ದ ಲೋಕೇಶ್ ಪೋಷಕರಿಂದ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು..