ಹಸೆಮಣೆ ಏರಬೇಕಿದ್ದ ಯೋಧ ಸಾವು..

273

ಬಳ್ಳಾರಿ /ಹೂವಿನಹಡಗಲಿ:ಹಸೆಮಣೆ ಏರಬೇಕಿದ್ದ ಯೋಧ ಸಾವು-ಬಸರಹಳ್ಳಿ ಗ್ರಾಮದಲ್ಲಿ ದೇಶ ಕಾಯೋ ಯೋಧನ ಸಾವು-ಹೂವಿನಹಡಗಲಿ ಬಸರಹಳ್ಳಿಯಲ್ಲಿ ನಡೆದ ಘಟನೆ- ಜುಲೈ 1 ರಂದು ಹಸೆಮಣೆ ಏರಲಿದ್ದ ಯೋಧ ಹನುಮಂತಪ್ಪ ವ

ಿಧಿ ಯಾವಾಗ? ಯಾರಿಗೆ? ಹೇಗೆ?ಮದುವೆಗೆಂದು ಊರಿಗೆ ಆಗಮಿಸಿದ ಯೋಧ ಸಾವು – ಮದುಮಗ ಆಗಬೇಕಿದ್ದ ಯೋಧ ಹೃದಯಾಘಾತದಿಂದ ಸಾವು – ಹನುಮಂತಪ್ಪ ೩೦ ಯೋಧ ಮನೆಯಲ್ಲಿ ಸಾವು – ಹೂವಿನ ಹಡಗಲಿ ತಾಲೂಕಿನ ಬಸರಳ್ಳಿ ಗ್ರಾಮದಲ್ಲಿ ಘಟನೆ – ನಾಳೆ ತನ್ನ ಹಾಗೂ ಸಹೋದರನ ಮದುವೆ ಜರುಗಬೇಕಾಗಿತ್ತು – ಸೇನೆಯಿಂದ ಮದುವೆ ಆಗಲು ರಜೆ ಪಡೆದು ಆಗಮಿಸಿದ್ದ ಯುವಕ ಯೋಧ ಹನುಮಂತಪ್ಪ – ಮದುವೆ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

ಆಟವಾಡುತ್ತೆ ಎನ್ನೋದಿಕ್ಕೆ ಹಸೆಮಣೆ ಏರಬೇಕಿದ್ದ ಯೋಧ ಹನುಮಂತಪ್ಪ ನ ಸಾವೇ ಒಂದು ನಿದರ್ಶನ

ಹೂವಿನಹಡಗಲಿ ಹಿರೇಮಲ್ಲನಕೇರಿಯ ಬಸರಹಳ್ಳಿ ಗ್ರಾಮದ ಯೋಧ ಹನುಮಂತಪ್ಪ ಜುಲೈ 1 ರಂದು ತನ್ನ ಬಾಳ ಸಂಗಾತಿ ಆಗುವವಳಿಗೆ ತಾಳಿ ಕಟ್ಟಲು ಸಾವಿರಾರು ಕಿಲೋ ಮೀಟರ್ ದೂರದಿಂದ ರಜೆ ಪಡೆದು ತವರಿಗೆ ಬಂದಿದ್ದ. ಅಪ್ಪ-ಅಮ್ಮ ತೋರಿಸಿದ ವಧುವಿಗೆ ಸಂಭ್ರಮದಿಂದ ತಾಳಿ ಕಟ್ಟಿ ಹೊಸ ಬದುಕಿಗೆ ಹೆಜ್ಜೆ ಇಡಲು ಕನಸುಗಳನ್ನು ಕಂಡಿದ್ದ. ಆದರೆ, ವಿಧಿ ಆತನನ್ನು ಬರಸಳೆದಿದೆ. ಇದೀಗ ಮದುವೆ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಶೋಕ ಸಾಗರ ಮಡುಗಟ್ಟಿದೆ.
ಬಸರಹಳ್ಳಿ ಗ್ರಾಮದ ಕೊಯಿರಾಲಗಟ್ಟಿ ಕೊಟ್ರಮ್ಮ ದೇವಪ್ಪ ದಂಪತಿಗಳ ದ್ವಿತೀಯ ಪುತ್ರನಾಗಿದ್ದ ಯೋಧ ಹನುಮಂತಪ್ಪ ದೇಶ ಕಾಯಲು ತೆರಳಿದ್ದ. ಇನ್ನೇನು ಆತನ ಮದುವೆ ಕಾರ್ಯ ಮುಗಿಸಿ ಜವಾಬ್ದಾರಿ ಕಳಚಿಕೊಳ್ಳಬೇಕೆಂಬ ಸಂಭ್ರಮದಲ್ಲಿ ದಂಪತಿಗಳು ತನ್ನ ಮಗನಿಗೆ ಅದೇ ಗ್ರಾಮದ ಗೌಡ್ರ ಗೋವಿಂದಪ್ಪ ಎಂಬುವರ ಪುತ್ರಿ ಕಾವೇರಿ ಆಲಿಯಾಸ್ ಶಿಲ್ಪಾಳನ್ನು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಜುಲೈ ೧ ರಂದು ಬೆಳಿಗ್ಗೆ ಅಂದ್ರೆ ನಾಳೇನೇ ೧೧-೩೦ ರಿಂದ ನಡೆವ ಅಭಿಜಿನ್‌ ಲಗ್ನದಲ್ಲಿ ವಿವಾಹ ಕಾರ್ಯಕ್ಕೆ ಸಿದ್ಧತೆ ಕೂಡ ನಡೆದಿತ್ತು.
ಮದುವೆಗಾಗಿ ಬಸಾಪುರ, ಗಂಗಾಪುರ, ಹಟ್ಟಿ, ನಾಗರಹಳ್ಳಿ, ಏಣಗಿ, ಕೋಡಿಹಳ್ಳಿ, ಕದಾಂಪುರ, ನಗರ, ಹತ್ತಿಗೇರಿ, ಹನುಮನಹಟ್ಟಿ, ಹಿರೇಮಲ್ಲನಕೇರಿ ಗ್ರಾಮಗಳ ಬಂಧುಗಳು ಸಹ ಸೇರಿದ್ದರು. ‌ಆಕಸ್ಮಾತ್ ಆಗಿ ನಡೆದ ಈ ಘಟನೆಗೆ ಮದುವೆ ಚಪ್ಪರದಲ್ಲೀಗ ಸೂತಕದ ಛಾಯೆ ಆವರಿಸಿದೆ. ಕುಟುಂಬದ ರೋದನ ಮುಗಿಲು ಮುಟ್ಟಿದೆ.