ಉಚಿತ ಗ್ಯಾಸ್ ಸೌಲಭ್ಯ.

265

ಚಾಮರಾಜನಗರ/ಕೊಳ್ಳೇಗಾಲ: ಕಡು ಬಡಜನರಿಗೆ ಉಚಿತ ಗ್ಯಾಸ್ ಸೌಲಭ್ಯ ನೀಡುತ್ತಿರುವುದು ಪ್ರಧಾನಮಂತ್ರಿ ನರೇಂದ್ರ ಮೋದಿರವರ ಜನಪ್ರಿಯ ಕಾರ್ಯಕ್ರಮ ಎಂದು ಮೈಸೂರು ಸಂಸದ ಪ್ರತಾಪ್‍ಸಿಂಹ ಅವರು ತಿಳಿಸಿದರು.ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಗುರುವಾರ ಭಾರತೀಯ ಜನತಾ ಪಾರ್ಟಿಯ ವತಿಯಿಂದ ನಡೆದ ಅನಿಲ ಸುರಕ್ಷತೆ ಮತ್ತು ಉಳಿತಾಯ ಕಾರ್ಯಕ್ರಮ ಹಾಗೂ ಕೇಂದ್ರ ಉಚಿತ ಗ್ಯಾಸ್ ಸೌಲಭ್ಯ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ನೀಡಿರುವ ಜನಪ್ರಿಯ ಕಾರ್ಯಕ್ರಮಗಳನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ನಮ್ಮ ಕೆಲಸ ಎಂದು ಹೇಳಿಕೊಳ್ಳೋತ್ತಿದ್ದಾರೆ. ಅಕ್ಕಿ, ಸಕ್ಕರೆ, ಗೋಧಿ ಸೇರಿದಂತೆ ಇನ್ನೀತರ ದೊಡ್ಡ ಮಟ್ಟದ ಕಾರ್ಯಕ್ರಮಗಳಲ್ಲಿ ಕೇಂದ್ರ ಸರ್ಕಾರದ ಹೆಸರನ್ನು ಹೇಳದೆ ರಾಜ್ಯ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದ ಸಿದ್ದರಾಮಯ್ಯರವರ ಸರ್ಕಾರ ರೈತರಿಗೆ 50 ಸಾವಿರ ಹಣವನ್ನು ಮನ್ನಾ ಮಾಡುವುದಾಗಿ ಹೇಳಿ ಜನರ ಮೂಗಿಗೆ ತುಪ್ಪ ಸವರುತ್ತಿದ್ದಾರೆ. ಕೇಂದ್ರ ಯೋಜನೆಗಳನ್ನು ರಾಜ್ಯ ಸರ್ಕಾರ ಮಾಡುತ್ತಿರುವುದಾಗಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದರು.
ಈ ಹಿಂದೆ ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿದ್ದಾಗ ಚಾ.ನಗರ ಜಿಲ್ಲೆಗೆ 218 ಕೋಟಿ ಹಣವನ್ನು ಬಿಡುಗಡ ಮಾಡಿ ಅಭಿವೃದ್ಧಿ ಮಾಡಲಾಗಿತ್ತು. ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ನಮ್ಮ ರಾಜ್ಯ ನಮ್ಮ ಯೋಜನೆ ಹಾಗೂ ಇನ್ನೀತರ ಮಹತ್ವವಾದ ಯೋಜನೆಗಳನ್ನು ರಾಜ್ಯಕ್ಕೆ ನೀಡಲಾಗಿತ್ತು ಎಂದು ತಿಳಿಸಿದರು.

ಮಾಜಿ ಸಚಿವ ವಿ.ಸೋಮಣ್ಣ ಮಾತನಾಡಿ, ಕೇಂದ್ರ ಸರ್ಕಾರ ನೀಡುತ್ತಿರುವ ಉಚಿತ ಉಜ್ವಲ ಯೋಜನೆಯು ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆ. ಅದು ಕರ್ನಾಟಕ ರಾಜ್ಯದ ಕೊಳ್ಳೇಗಾಲ ತಾಲ್ಲೂಕಿನ ತಾಯಂದಿರಿಗೆ ಸಿಕ್ಕಿರುವುದು ಮೆಚ್ಚುವಂತಹ ಕೆಲಸ ಎಂದರು.ಕಾಂಗ್ರೇಸ್ ಪಕ್ಷವೂ 50 ವರ್ಷಗಳಿಂದ ಆಡಳಿತ ಮಾಡಿದ್ದರೂ ಸಹಾ ಉತ್ತಮ ಕಾರ್ಯಕ್ರಮ ರೂಪಿಸುವಲ್ಲಿ ವಿಫಲವಾಗಿದೆ. ದೇಶದ ಜನರಿಗೆ ಯಾವುದೇ ಕೆಲಸವನ್ನು ಮಾಡಿಲ್ಲ ಆದರೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನರಿಗೆ ಜನಪ್ರಿಯ ಯೋಜನೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.

ಮಾಜಿ ಶಾಸಕ ಜಿ.ಎನ್ ನಂಜುಂಡಸ್ವಾಮಿ ಮಾತನಾಡಿ, ದೇಶದಲ್ಲಿರುವ ಕಡುಬಡವರಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿರವರು ಉಚಿತವಾಗಿ ಗ್ಯಾಸ್ ನಿಡುವ ಮೂಲಕ ಉತ್ತಮ ಯೋಜನೆ ಮಾಡಿದ್ದಾರೆ. ದೇಶದ 10 ಕೋಟಿಗೂ ಹೆಚ್ಚು ಜನರು ಈ ಯೋಜನೆಯನ್ನು ಪಡೆಯಲಿದ್ದಾರೆ. ಅದ್ದರಲ್ಲಿ ನಮ್ಮ ಚಾಮರಾಜನಗರ ಜಿಲ್ಲೆಗೆ ಸುಮಾರು 10 ಸಾವಿರ ಕುಂಟುಂಬಗಳು ಹಾಗೂ ಕೊಳ್ಳೇಗಾಲ ತಾಲ್ಲೂಕಿನ ಸುಮಾರು 3 ಸಾವಿರ ಕುಟುಂಬಕ್ಕೆ ಈ ಯೋಜನೆಯು ತಲುಪಲಿದೆ ಎಂದು ತಿಳಿಸಿರು.

ಈ ಸಂರ್ಧಭದಲ್ಲಿ ಮಾಜಿ ಶಾಸಕ ಗುರುಸ್ವಾಮಿ, ಮುಖಂಡರಾದ ಡಾ.ದತ್ತೇಶ್‍ಕುಮಾರ್, ಮಂಗಳ ಶಿವಕುಮಾರ್, ಮಾಂಬಳ್ಳಿ ನಂಜುಂಡಸ್ವಾಮಿ, ಬಾಗಲಿ ಮಲ್ಲೇಶ್, ಬಿಜೆಪಿ ಟೌನ್ ಮಂಡಲದ ಅಧ್ಯಕ್ಷ ರಮೇಶ್ ಮುರಾರಿ, ಪ್ರಧಾನ ಕಾರ್ಯದರ್ಶಿ ಜಿ.ಪಿ ಶಿವಕುಮಾರ್, ಸುರೇಶ್, ಶಿವಮೂರ್ತಿ, ತಾ.ಪಂ ಸದಸ್ಯರಾದ ಮರಿಸ್ವಾಮಿ, ಸುರೇಶ್, ಕೃಷ್ಪಪ್ಪ, ನಗರಸಭಾ ಸದಸ್ಯರಾದ ಸುಮಾಸುಬ್ಬಣ್ಣ, ಲಕ್ಷ್ಮೀಇಂದ್ರೇಶ್ ಹಾಗೂ ಕಾರ್ಯಕರ್ತರು ಇನ್ನಿತರರು ಹಾಜರಿದ್ದರು.