ಮಂಚಕ್ಕೆ ಕರೆದ ಅಧಿಕಾರಿ ವಿರುದ್ಧ ಪ್ರಕರಣ ದಾಖಲು

334

ಬಳ್ಳಾರಿ: /ಹೊಸಪೇಟೆ :ನ್ಯಾಯ ಕೇಳಲು ಹೋದ ಮಹಿಳೆಗೆ ಮಂಚಕ್ಕೆ ಕರೆದ ಆರೋಪ ಪ್ರಕರಣ.ಹೊಸಪೇಟೆ ತಾಲೂಕಿನ ಕಮಲಾಪುರ ಪ,ಪಂ ಮುಖ್ಯಾಧಿಕಾರಿ ಶಿವಕುಮಾರ್ ಕಟ್ಟಿಮನಿ ವಿರುದ್ದ ಎಫ್ ಐಆರ್ ದಾಖಲು.ಸಂತ್ರಸ್ತೆ ಮಹಿಳೆ ನೀಡಿದ ದೂರಿನ ಮೇರೆಗೆ ಶಿವಕುಮಾರ್ ಕಟ್ಟಿಮನಿ ಸೇರಿದಂತೆ ೬ ಜನರ ವಿರುದ್ದ ಪ್ರಕರಣ ದಾಖಲು.ಐಪಿಸಿ ಸೇಕ್ಷನ್,354(ಎ),354(ಡಿ),143,506,504,147,323,149 ಅಡಿಯಲ್ಲಿ ಪ್ರಕರಣ ದಾಖಲು‌‌.

ಈ ಪ್ರಕರಣ ಕುರಿತು ಬಳ್ಳಾರಿ ಎಸ್,ಪಿ, ಆರ್, ಚೇತನ್ ಹೇಳಿಕೆ.ಮಹಿಳೆ ನೀಡಿದ ದೂರಿನ ಮೇರೆಗೆ ಕಮಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಮಲಾಪುರ ಪ,ಪಂ ಮುಖ್ಯಾಧಿಕಾರಿ ಶಿವಕುಮಾರ್ ಕಟ್ಟಿಮನಿ ಸೇರಿ ೬ಜನರ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ.ಮಹಿಳೆ ಮತ್ತು ಶಿವಕುಮಾರ್ ನಡುವೆ ನಡೆದ ಆಡಿಯೋ ಸಂಭಾಷಣೆ ಯನ್ನ ಎಫ್ ಎಸ್ ಎಲ್ ಕಳುಹಿಸಲಾಗುವುದು.ವರದಿ ಬಂದ ಬಳಿಕ ಈ ಆಡಿಯೋ ಸಂಭಾಷಣೆಯ ಬಗ್ಗೆ ಗೊತ್ತಾಗಲಿದೆ.
ನ್ಯಾಯ ಕೇಳಲು ಹೋದ ಮಹಿಳೆಯನ್ನ ಕಮಲಾಪುರ ಪ,ಪಂ ಮುಖ್ಯಾಧಿಕಾರಿ ಮಂಚಕ್ಕೆ ಕರೆದಿದ್ದ.