ಅನಾಥ ಮಕ್ಕಳಿಗೆ ಬೆಡ್ ಶಿಟ್ ವಿತರಣೆ..

308

ಬಳ್ಳಾರಿ /ಹೊಸಪೇಟೆ: ಸಂಪಾದಿಸಿ ಬಚ್ಚಿಟ್ಟ ಹಣ ಕಳ್ಳರ ಪಾಲಾಗಬಹುದು. ಆದರೆ ಸಂಪಾದಿಸಿದ ಹಣದ ಅಲ್ಪಭಾಗವನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸಿದವರು ಜನರ ಮನದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ ಎಂದು ಡಾನ್ ಬಾಸ್ಕೋ ಸಂಸ್ಥೆಯ ಫಾದರ್ ಲಾರೆನ್ಸ್ ಅಭಿಪ್ರಾಯಪಟ್ಟರು.

ನಗರದ ಡಾನ್‌ಬಾಸ್ಕೋ ಸಂಸ್ಥೆಯ ಅನಾಥಾಶ್ರಮದಲ್ಲಿ ಶನಿವಾರ ಡಣಾಪುರ ಗ್ರಾಪಂ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಸಿಎ.ಗಾಳೆಪ್ಪ ಆಯೋಜಿಸಿದ್ದ  ಅನಾಥಮಕ್ಕಳಿಗೆ ಬೆಡ್‌ಶಿಟ್ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಇತ್ತೀಚೆಗೆ ಸಮಾಜ ಸೇವೆ ಎನ್ನುವ ಹೆಸರಲ್ಲಿ ಲಾಭಿ ಮಾಡುವವರೆ ಹೆಚ್ಚು. ಜತೆಗೆ ನಿಸ್ವ್ವಾರ್ಥ ಮನಸ್ಸಿನಿಂದ ಅನಾಥ ಮಕ್ಕಳ ಜೀವನ ಚೆನ್ನಾಗಿರಬೇಕೆಂದು ಬಯಸಿ ಸಹಾಯ ಮಾಡುವವರು ಕಡಿಮೆ ಇದ್ದಾರೆ. ಆದರೆ ಅನಾಥ ಮಕ್ಕಳು ದೇವರ ಮಕ್ಕಳಿದ್ದಂತೆ, ಮ್ಕಕಳ ಮೇಲಿನ ಪ್ರಿತಿಯಿಂದ ಸಮಾಜ ಸೇವಕ ಗಾಳೆಪ್ಪ ಆಶ್ರಮಕ್ಕೆ ಸಹಾಯಸ್ತ ಚಾಚಿರುವುದ ಸ್ವಾಗತ ಎಂದರು.

ಅರಣ್ಯ ಹ್ಕಕು ಸಮಿತಿ ಅಧ್ಯಕ್ಷ ಸಿಎ.ಗಾಳೆಪ್ಪ. 50ಕ್ಕೂ ಹೆಚ್ಚು ಮಕ್ಕಳಿಗೆ ಬೆಡ್‌ಶಿಟ್ ವಿತರಿಸಿ ಮಾತನಾಡಿ, ಅನಾಥ ಮಕ್ಕಳ ಕಷ್ಟಕ್ಕೆ ಸದಾ ನನ್ನ ಸಹಾಯ ಇದ್ದೆ ಇರುತ್ತದೆ ಎಂದರು. ಪಿಡಿಒ ಮಂಜುಳಾ ರಾಣಿ, ಗ್ರಾಪಂ ಸದಸ್ಯರಾದ ವೆಂಕಟೇಶ್ ನಾಯ್ಕ್, ಅನಿತಾ ಸುರೇಶ್, ಕರುನಾಡು ಕಲಿಗಳ. ಕ್ರಯಾಶೀಲ ಸಮಿತಿಯ ಅಧ್ಯಕ್ಷ ಪಿ.ವಿ.ವೆಂಕಟೇಶ್,  ಪರ್ತಕರ್ತ ಪೂಜಾರ್ ವೆಂಕೋಬ ನಾಯಕ, ಮಹಮ್ಮದ್, ಸಯ್ಯದ್ ಹೈದರ್, ವಿಜಯಲಕ್ಷ್ಮಿ, ಲತಾ, ನೆಟ್ಟಕಲ್, ಚಂದ್ರು, ಹನುಮಂತ, ಕಾಶಿ, ಅಮೀರ್, ಹರಿಶ್, ಸೌಮ್ಯ, ಪ್ರಭಾಲತಾ, ಜಯ ಇತರರಿದ್ದರು.