ಕೈ ಕಾರ್ಯಕರ್ತರ ಎಣ್ಣೆ ಗಮ್ಮತ್ತು..!

422

ತುಮಕೂರು:ಜಿಲ್ಲೆ ಮಧುಗಿರಿಯಲ್ಲಿ ಸಿ.ಎಂ.ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ಕೈ ಕಾರ್ಯಕರ್ತರು ಅಕ್ಷರಶಃ ಎಣ್ಣೆ ಕುಡಿದು ತೂರಾಡಿದಾರೆ. ಮಧುಗಿರಯ ಕೊಡಿಗೇನಳ್ಳಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ಕಾರ್ಯಕ್ರಮ ನಡೆಯುತಿತ್ತು. ಅತ್ತ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯರ, ಸಚಿವ ಟಿಬಿ ಜಯಚಂದ್ರ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ರೆ, ಇತ್ತ ಕಾರ್ಯಕರ್ತರು ವೇದಿಕೆಯ ಹಿಂಭಾಗದಲ್ಲಿ ಎಣ್ಣೆ ಕುಡಿದು ತೂರಾಡುತಿದ್ರು. ಒಂದು ಗುಂಪು ಎಣ್ಣೆ ಕುಡಿಯುತಿದ್ರೆ ಇನ್ನೊಂದು ಗುಂಪು ಮದ್ಯದ ಬಾಟಲಿ ಸರಬರಾಜು ಮಾಡುತಿತ್ತು. ಶಾಸಕ ಕೆ.ಎನ್ ರಾಜಣ್ಣ ತಾಲೂಕಿನ ಮೂಲೆ ಮೂಲೆಯಿಂದ ಹಣ ಮತ್ತು ಹೆಂಡದ ಆಸೆ ತೋರಿಸಿ ಕರೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ. ಫುಲ್ ಬಾಟಲ್ ಎಣ್ಣೆ.. ಕೈ ತುಂಬ ದುಡ್ಡು ಪಡೆದ ಬಾಡಿಗೆ ಕಾರ್ಯಕರ್ತರು ಅಮಲಿನಲ್ಲಿ ತೇಲಾಡಿ ವಾಪಸ್ಸಾಗಿದ್ದಾರೆ. ಶಾಸಕ ಕೆ.ಎನ್ ರಾಜಣ್ಣ ಮುಂದಿನ ಚುನಾವಣೆಗೆ ಈಗಿನಿಂದಲೇ ಹಣ ಮತ್ತು ಹೆಂಡ ಹಂಚುವ ಮೂಲಕ ತಯಾರಿ ನಡೆಸುತಿದ್ದಾರೆ ಅನ್ನೊದು ಮೇಲ್ನೋಟಕ್ಕೆ ಕಂಡುಬಂದಿದೆ.