ಸ್ಮಾರಕಗಳಿಗೆ ದಕ್ಕೆ….

299

ಬಳ್ಳಾರಿ /ಹೊಸಪೇಟೆ- ದಕ್ಷಿಣ ಭಾರತದ ಕಾಶಿ ಎಂದೇ ಪ್ರಖ್ಯಾತಿ ಹೊಂದಿದ ಹಂಪಿಯಲ್ಲಿ ಒಂದಲ್ಲ ಒಂದು ರೀತಿಯ ಎಡವಟ್ಟುಗಳಾಗುತ್ತಿವೆ. ಮೊನ್ನೆಯಷ್ಟೆ ಹಂಪಿಯಲ್ಲಿ ಶಿವಲಿಂಗವನ್ನು ಧ್ವಂಸ ಮಾಡಿದ ದುಷ್ಕರ್ಮಿಗಳು ಹಂಪಿಯಲ್ಲಿನ ಮತ್ತೊಂದು ಸ್ಮಾರಕಕ್ಕೆ ದಕ್ಕೆ ಮಾಡಿದ್ದಾರೆ. ಹಂಪಿಗೆ ಪ್ರವಾಸಕ್ಕೆ ಬಂದ ವ್ಯಕ್ತಿಯೊಬ್ಬ ತನ್ನ ಬೇಜಬ್ದಾರಿಯ ಕಾರಣಕ್ಕೆ, ಕಪಿ ಚೇಷ್ಟೆ ಮಾಡಲು ಹೋಗಿ, ಹಜರ ರಾಮ ದೇವಸ್ಥಾನದ ಮುಂಭಾಗದ ಪಾನ್ ಸುಪಾರಿ ಬಜಾರ್ ಬಳಿಯ ಕಂಬವೊಂದನ್ನ ನೆಲಕ್ಕುರುಳಿಸಿದ್ದಾನೆ. ಸ್ಥಳದಲ್ಲೇ ಇದ್ದ ಹಂಪಿ ಪೋಲಿಸರು ಆ ವ್ಯಕ್ತಿಯನ್ನ ಠಾಣೆಗೆ ಕರೆದೊಯ್ದು ಆತನ ವಿರುದ್ದು ಪ್ರಕರಣ ದಾಖಲಿಸಿದ್ದಾರೆ.ಇನ್ನು ಬಂದನಕ್ಕೊಳಗಾದ ವ್ಯಕ್ತಿ ಬಳ್ಳಾರಿ ಜಿಲ್ಲೆಯ ಸಿರಗುಪ್ಪದ ಮಧು ಉದ್ದೇಶ ಪೂರ್ವಕವಾಗಿ ಕಂಬವನ್ನ ನೆಲಕ್ಕೆ ಉರುಳಿಸಿದ್ದು ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದಲ್ಲದೇ, ಸ್ಮಾರಕಗಳನ್ನ ಹಾನಿಗೊಳಿಸಿದ ಆರೋಪದ ಮೇಲೆ ಈತನ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ. ಮಧು ಎನ್ನುವ ವ್ಯಕ್ತಿ ಸ್ಮಾರಕ್ಕೆ ಹಾನಿಮಾಡಿರುವುದನ್ನ ಕಣ್ಣಾರೆ ಕಂಡ ಪೋಲಿಸರು ವ್ಯಕ್ತಿಯನ್ನ ವಶಕ್ಕೆ ಪಡೆದು ಕ್ರಮ ಜರುಗಿಸಿದ್ದಾರೆ .ಇಂತಾ ಕುಚೇಷ್ಟಿಮಾಡುವ ಕಿಡಿಗೇಡಿಗಳಿಂದ ಧರ್ಮ ಧರ್ಮಗಳ ಮಧ್ಯೆ ಸಂಘರ್ಷಗಳು ಉಂಟಾಗಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂಬುದು ಜನರ ಅಭಿಪ್ರಾಯವಾಗಿದೆ.