ಪರಿಸರದಲ್ಲಿ ಮಹಿಳೆಯರ ಪಾತ್ರ ಬಹಳಷ್ಟು…

398

ಬಳ್ಳಾರಿ /ಹೊಸಪೇಟೆ : ಪರಿಸರ ಸಂರಕ್ಷಣೆಯಲ್ಲಿ ಮಹಿಳೆಯರ ಪಾತ್ರ ಬಹಳಷ್ಟು ಪ್ರಾಮುಖ್ಯತೆ ಪಡೆದಿರುತ್ತದೆ ಎಂದು ಪರಿಸರ ಪ್ರೇಮಿ ಹಾಗೂ ವನ್ಯಜೀವಿ ಛಾಯಾಗ್ರಾಹಕ ಪಂಪಯ್ಯ ಮಳಿಮಠ ಹೇಳಿದರು.

ತಾಲೂಕಿನ ಕಮಲಾಪುರ ಪಟ್ಟಣದ ಜೈಭೀಮ ನಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಸ್ಥೆಯವರು ಬುಧುವಾರ ಆಯೋಜಿಸಿದ್ದ ಪರಿಸರ ಮಾಹಿತಿ ಮತ್ತು ಬೀಜದುಂಡೆ ನಾಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಮಹಿಳೆ ಮನೆಗೊಂದು ಮರ ಬೆಳೆಸಿ ಸಾಲು ಮರದ ತಿಮ್ಮಕ್ಕನಂತೆ ಮಾದರಿಯಾಗಿ ಜೀವಿಸಬೇಕು ಎಂದರು. ಶಿಕ್ಷಕ ರಾಜಗೋಪಾಲ್ ಅವರು ಪರಿಸರದ ಸ್ವಚ್ಚತೆ ಕುರಿತು ಮಾತನಾಡಿದರು. ಕಾರ್ಯಕ್ರಮದ ನಿಮಿತ್ತ ಸಂಸ್ಥೆಯವರು 2400 ಬೀಜದುಂಡೆಗಳನ್ನು ತಯಾರಿಸಿದ್ದರು. ಹೊಂಗೆ, ಬೇವು, ಹುಣಸೆ, ನೇರಲೆ, ಹಲಸು ಸೇರಿದಂತೆ ವಿವಿಧ ಬೀಜಗಳನ್ನು ಬಳಸಲಾಗಿತ್ತು.

ಸಂಸ್ಥೆಯ ಮೇಲ್ವಿಚಾರಕಿ ಜ್ವಾಲಮ್ಮ, ಗುಂಪಿನ ಅಧ್ಯಕ್ಷೆ ಗಿರಿಜಮ್ಮ, ನಾಗವೇಣಿ, ಲತಾ, ಮತ್ತು ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಅರಣ್ಯ ಹಕ್ಕು ಸಮಿತಿ ಸದಸ್ಯ ಅಂಬರೀಶ್ ವಾಲ್ಮೀಕಿ ಸೇರಿ ಜೈಭೀಮನಗರದ ಬೆಟ್ಟದಲ್ಲಿ ಬೀಜದುಂಡೆಗಳನ್ನು ನಾಟಿ ಮಾಡಿದರು.