ಅರ್ಚಕರಿಂದ ವಿಶೇಷ ಪೂಜೆ.

253

ಬಳ್ಳಾರಿ /​ಹೊಸಪೇಟೆ: ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಾದ ಹಕ್ಕ-ಬುಕ್ಕರ ಗುರುಗಳಾದ ಶ್ರೀ ವಿಧ್ಯಾರಣ್ಯ ಸ್ವಾಮಿಗೆ ಗುರುಪೂರ್ಣಮಿ ಅಂಗವಾಗಿ ವಿಧ್ಯಾರಣ್ಯ ಮೂರ್ತಿಗೆ ವಿರುಪಾಕ್ಷೇಶ್ವರ ಸ್ವಾಮಿ ದೇವಸ್ಥಾನದ ಅರ್ಚಕರಿಂದ ವಿಶೇಷ ಪೂಜೆ ನೆರವೇರಿಸಲಾಯಿತು

ಇಂದು ಬೆಳಗ್ಗೆ ವಿರುಪಾಕ್ಷೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ವಿಧ್ಯಾರಣ್ಯ ಮಠದಲ್ಲಿರುವ ಮೂರ್ತಿಗೆ ವಿವಿಧ ಬಗೆಯ ಮಂಗಳದ್ರವ್ಯಗಳಿಂದ ಅಭಿಷೇಕ ಮಾಡಿ ಹೂವುಗಳಿಂದ ಅಲಂಕಾರ ಮಾಡಿ ಮಹಾಮಂಗಳಾರತಿ ಬೆಳಗಲಾಯಿತು

ಇನ್ನು ವಿಧ್ಯಾರಣ್ಯ ಮಠದ ಪೀಠಾಧಿಪತಿಗಳಾದ ಶ್ರೀ ವಿಧ್ಯಾರಣ್ಯ ಭಾರತೀಸ್ವಾಮಿಜೀಗಳು ಮೂಲ ಸಂಸ್ಥಾನದಲ್ಲಿ ಗುರುಮಂಡಳ ಪೂಜೆಯನ್ನು ನೆರವೇರಿಸಿದರು ಪ್ರತಿನಿತ್ಯದಂತೆ ಅರ್ಚಕರು ವಿರುಪಾಕ್ಷೇಶ್ವರ ಸ್ವಾಮಿಗೆ ಅಭಿಷೇಕ ಮಾಡಿ ಬೆಳ್ಳಿಕವಚದ ಅಲಂಕಾರ ಹಾಗು ನೈವೇದ್ಯ ಮಾಡಿ ಮಹಾಮಂಗಳಾರತಿ ಬೆಳಗಿದರು

ಗುರುಪೂರ್ಣಮಿ ಅಂಗವಾಗಿ ಸುತ್ತಮುತ್ತಲಿನ ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು ಈ ಎಲ್ಲಾಕಾರ್ಯಕ್ರಮದ ಕುರಿತು ದೇವಸ್ಥಾನದ ಅರ್ಚಕರಾದ ಮುರಳೀಧರ ಸ್ವಾಮಿ ಮಾತನಾಡಿದರು…