ಗುರು ಪೌರ್ಣಮಿ ಮಹೋತ್ಸವ..

321

ಚಿಕ್ಕಬಳ್ಳಾಪುರ/ಗುಡಿಬಂಡೆ ಪಟ್ಟಣದಲ್ಲಿ ಶ್ರೀ ಶಿರಡಿ ಸಾಯಿ ಬಾಬಾ ಟ್ರಸ್ಟ್ ವತಿಯಿಂದ 12 ನೇ ವರ್ಷದ ಗುರು ಪೌರ್ಣಮಿ ಮಹೋತ್ಸವದ ಅಂಗವಾಗಿ ಗುಡಿಬಂಡೆ ರಾಜ ಬೀದಿಯಲ್ಲಿ ಶಿರಡಿ ಸಾಯಿ ಬಾಬಾ ರವರ ಅದ್ದೂರಿ ಮೆರವಣಿಗೆ ಹಾಗೂ ದೇವಾಲಯದಲ್ಲಿ ಗುರು ಸಾಯಿಬಾಬಾ ಗೆ ವಿಶೇಷ ಅಲಂಕಾರ ಮಾಡಿರುವುದು. ದೇವರ ದರ್ಶನ ಪಡೆಯಲು ಸಾಲುಗಟ್ಟಿ ನಿಂತಿರುವ ಭಕ್ತಾದಿಗಳು.

ಎಲ್ಲಾ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗವನ್ನು ಶ್ರೀ ಸಾಯಿಬಾಬಾ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಶ್ರೀ ಶಿರಡಿ ಸಾಯಿ ಬಾಬಾ ಟ್ರಸ್ಟ್ ಅಧ್ಯಕ್ಷರು ನಾಗರಾಜ್ ಜಿ ಎನ್, ಪ.ಪಂ ಅಧ್ಯಕ್ಷರು ಚಂದ್ರಶೇಖರ ನಾಯ್ಡು,ಕನ್ನಡ ಸೇನೆ ಕರ್ನಾಟಕ ಅಧ್ಯಕ್ಷರು ಅಂಬರೀಶ್,ಶ್ರೀ ಸಾಯಿ ಸೇವಾ ಟ್ರಸ್ಟ್ ಉಪಾಧ್ಯಕ್ಷರಾದ ಜಿ.ಕೆ.ನಿರ್ಮಲಾ ನಾಯ್ಡು,ಪ್ರಧಾನ ಕಾರ್ಯದರ್ಶಿ ಪಿ.ವಿ.ವೀಣಾ ಕುಮಾರಿ, ಪದಾದಿಕಾರಿಗಳಾದ ಮೀನಾ ಕುಮಾರಿ, ಪಿ.ವಿ.ನಳೀನ ಕುಮಾರಿ, ಪಿ.ವಿ.ವಿಜಯ್ ಕುಮಾರಿ,ಜಿ.ಕೆ.ಮಾಲಾ ನಾಯ್ಡು,ಜಿ.ವಿ.ದ್ವಾರಕನಾಥ ನಾಯ್ಡು,ವಂದನಾ ಇನ್ನೂ ಹಲವಾರು ಪ್ರಮುಖ ಕಾರ್ಯಕರ್ತರು ಭಾಗವಹಿಸಿದ್ದರು.