ಹುಟ್ಟು ಹಬ್ಬ ಅಂಗವಾಗಿ ರಕ್ತದಾನ..

221

ಬಳ್ಳಾರಿ /ಹೊಸಪೇಟೆ. ಸ್ಥಳೀಯ ಕಾಂಗ್ರೆಸ್ ಮುಖಂಡ ಹಾಗೂ ಹಂಪಿ ಜಿಲ್ಲಾ ಪಂಚಾಯಿತಿ ಸದಸ್ಯ ಪ್ರವೀಣ್ ಸಿಂಗ್ ಭಾನುವಾರ ತಮ್ಮ ಜನ್ಮ ದಿನವನ್ನು ಆಚರಿಸಿಕೊಂಡರು.

ಪ್ರವೀಣ್ ಸಿಂಗ್ ಜನ್ಮ ದಿನದ ಅಂಗವಾಗಿ ಅವರ ಅಭಿಮಾನಿಗಳಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಜರುಗಿತು. ಸ್ತಳೀಯ ಅಮರಾವತಿಯಯಲ್ಲಿ ಜರುಗಿದ ರಕ್ತದಾನ ಶಿಬಿರದಲ್ಲಿ 200ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು. ಇದಕ್ಕೂ ಮುನ್ನ ನಗರದ ಕೊಂಡನಾಯಕನಹಳ್ಳಿಯ ಅನಾಥಾಶ್ರಮದಲ್ಲಿ ಕೇಕ್ ಕತ್ತರಿಸುವ ಮೂಲಕ ಪ್ರವೀಣ್ ಸಿಂಗ್, ಅನಾಥಾಶ್ರಮದ ಮಕ್ಕಳೊಂದಿಗೆ ತಮ್ಮ ಜನ್ಮ ದಿನವನ್ನು ಆಚರಿಸಿಕೊಂಡರು.
ನಂತರ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಗೆ ಅವರು ಚಾಲನೆ ನೀಡಿದರು. ಪ್ರವೀಣ್ ಸಿಂಗ್ ಹುಟ್ಟು ಹಬ್ಬದ ಅಂಗವಾಗಿ ಅವರ ಅಭಿಮಾನಿಗಳು ಸ್ಥಳೀಯ ಉಪವಿಭಾಗ ಮಟ್ಟದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಿಸಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ದೀಪಕ್ ಕುಮಾರ್ ಸಿಂಗ್, ಎಲ್.ಸಿದ್ದನಗೌಡ, ಬಂಡೆ ರಂಗಪ್ಪ, ಗುಜ್ಜಲ ನಾಗರಾಜ, ಕೆ.ಎಂ.ಹಾಲಪ್ಪ, ಅಯ್ಯಾಳಿ ತಿಮ್ಮಪ್ಪ, ಡಿ.ವೆಂಕಟರಮಣ, ಮೋಹನ್, ಮರಿಸ್ವಾಮಿ, ಅಮಾಜಿ ಹೇಮಣ್ಣ, ಲಿಯಾಕತ್ ಅಲಿ, ಕೊಟಗಿನಹಾಳ್ ಹುಲುಗಪ್ಪ, ವಾಸು, ರವಿ ಕುಮಾರ್, ನಗರಸಭೆ ಸದಸ್ಯರಾದ ಗುಡಗುಂಟಿ ಮಲ್ಲಿಕಾರ್ಜುನ, ಮಂಜುನಾಥ, ಧನಲಕ್ಷ್ಮಿ, ಬೆಲ್ಲದ ರವೂಫ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.