ಕೆಂಪೇಗೌಡ ಜಯಂತಿ ಪೂರ್ವಭಾವಿ ಸಭೆ

260

ಚಾಮರಾಜನಗರ/ಕೊಳ್ಳೇಗಾಲ: ಪಟ್ಟಣದಲ್ಲಿ ನಾಡಪ್ರಭು ಕೆಂಪೇಗೌಡರವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಹನೂರು ಶಾಸಕ ಆರ್.ನರೇಂದ್ರ ಅವರು ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಕೆಂಪೇಗೌಡ ಜಯಂತಿ ಆಚರಿಸುವ ಸಂಬಂಧ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂದು ಪಟ್ಟಣದ ಮುಖ ಬೀದಿಗಳಲ್ಲಿ ನಾಡಪ್ರಭು ಕೆಂಪೇಗೌಡ ಅವರ ಉತ್ಸವ ನಡೆಸಲಾಗುವುದು. ಮೆರವಣಿಗೆಯಲ್ಲಿ ನಾನಾ ಸಾಂಸ್ಕøತಿಕ ಕಲಾ ತಂಡಗಳು ಭಾಗವಹಿಸಲಿವೆ. ನಂತರ ಪಟ್ಟಣದ ನ್ಯಾಷನಲ್ ಮಿಡ್ಲ್ ಸ್ಕೂಲ್ ಮ್ಯೆದಾನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ದಿವ್ಯಸಾನ್ನಿದ್ಯ, ಮುಖ್ಯಭಾಷಣಕಾರರು ಹಾಗೂ ಸನ್ಮಾನಿತರರನ್ನು ಒಕ್ಕಲಿಗ ಸಂಘದ ಪದಾಧಿಕಾರಿಗಳ ಜೊತೆಯಲ್ಲಿ ತೀರ್ಮಾನಿಸಿ ಎಂದು ತಿಳಿಸಿದರು.
ಪ್ರತಿಯೊಂದು ರಾಷ್ಟ್ರೀಯ ಹಬ್ಬಗಳಿಗೆ ಪ್ರತಿಯೊಬ್ಬ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಾಗಬೇಕು, ವಿವಿಧ ಸಂಘ ಸಂಸ್ಥೆಯ ಮುಖಂಡರು ಹಾಗೂ ಎಲ್ಲಾ ಜನಾಂಗದ ಯಜಮಾನುರುಗಳಿಗೆ ಸಭೆಯ ಆಹ್ವಾನ ನೀಡಬೇಕು ಎಂದರು.
ನಗರಸಭೆ ಅಧಿಕಾರಿಗಳು ರಸ್ತೆಯುದ್ದಕ್ಕೂ ಮಾವಿನ ತೋರಣ ಕುಡಿಯುವ ನೀರು, ಪಟ್ಟಣದಲ್ಲಿ ಮೆರವಣಿಗೆ ಹಾಗೂ ಕಾರ್ಯಕ್ರಮದ ಸ್ಥಳಗಳನ್ನು ಸ್ವಚ್ಚತೆ ಕಾಪಾಡಿ ಎಲ್ಲಾ ಜಯಂತಿಗಳಂತೆ ಕೆಂಪೇಗೌಡರ ಜಯಂತಿಯನ್ನು ಯಶಸ್ವಿ ಮಾಡಲು ಎಲ್ಲಾರ ಸಹಕಾರ ಅಗತ್ಯ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಜಿ.ಪಂ ಉಪಾಧ್ಯಕ್ಷ ಬಸವರಾಜು, ತಾ.ಪಂ ಅಧ್ಯಕ್ಷ ರಾಜು, ಸದಸ್ಯ ಅರುಣ್, ನಗರಸಭೆ ಅಧ್ಯಕ್ಷ ಶಾಂತರಾಜು, ಸದಸ್ಯೆ ಕೃಷ್ಣವೇಣಿ, ನಾಮನಿರ್ದೇಶಿತ ಸದಸ್ಯ ಶಂಖರ್‍ನಾರಾಯನ್‍ಗುಪ್ತ, ತಹಶೀಲ್ದಾರ್ ಕಾಮಾಕ್ಷಮ್ಮ, ತಾ.ಪಂ ಇಒ ಡಾ.ದರ್ಶನ್, ಬಿಆರ್‍ಸಿ ಮಂಜುಳ, ಯಳಂದೂರು ಮತ್ತು ಕೊಳ್ಳೇಗಾಲ ಒಕ್ಕಲಿಗರ ಸಂಘದ ಅಧ್ಯಕ್ಷ ರಾಜೂಗೌಡ, ಒಕ್ಕಲಿಗ ನೌಕರರ ಸಂಘದ ಅಧ್ಯಕ್ಷ ಸಿದ್ದಲಿಂಗೇಗೌಡ, ಸಂಘದ ನಿರ್ದೇಶಕರು ಆನಂದ ನಾಗರೀಕ ಹಿತರಕ್ಣಾ ಸಮಿತಿ ನಟರಾಜಮಾಳಿಗೆ ಇನ್ನೀತರರು ಹಾಜರಿದ್ದರು.