ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ಜಿ.ಪಂ ಅಧ್ಯಕ್ಷೆ ಭೇಟಿ

303

ಬಾಗಲಕೋಟೆ/ ಹುನಗುಂದ: ಬಿಸಿಯೂಟ ಸೇವಿಸಿದ ಮೂವತೈದಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಗಂಗೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಅಸ್ವಸ್ಥಗೊಂಡ ಮಕ್ಕಳನ್ನು ಹುನಗುಂದ ತಾಲೂಕು ಆಸ್ಪತ್ರೆ ಹಾಗೂ ಅಮೀನಗಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಮಕ್ಕಳು ಚೇತರಿಸಿಕೊಳ್ಳುತ್ತಿದ್ದಾರೆ.
ಇನ್ನು ಸುದ್ದಿ ತಿಳಿದ ಬಾಗಲಕೋಟೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಆಸ್ಪತ್ರೆಗೆ ಭೇಟಿ ನೀಡಿ ಶಾಲಾ ಮಕ್ಕಳ ಯೋಗಕ್ಷೇಮ ವಿಚಾರಿಸಿದ್ರು.ಅಲ್ದೆ ಮಕ್ಕಳಿಗೆ ಬೇಕಾದ ಅಗತ್ಯ ಚಿಕಿತ್ಸೆ ನೀಡುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದ್ರು.

ಇನ್ನು ಶಾಲಾಮಕ್ಕಳು ಸಜ್ಜಕ ತಿಂದಿದ್ದೆ ಅಸ್ವಸ್ಥತಗೊಳ್ಳಲು ಕಾರಣ ಎಂದು ತಿಳಿದುಬಂದಿದ್ದು, ಸಜ್ಜಕ ಮಾಡಲು ಬಳಸಿದ ರವೆ ನಾಲ್ಕೈದು ತಿಂಗಳು ಹಿಂದೆ ಪೂರೈಕೆ ಮಾಡಿದ್ದು ಎನ್ನಲಾಗಿದೆ. ಹೀಗಾಗಿ ರವೆಯಲ್ಲಿ ಹುಳುಗಳು ಬಿದ್ದಿದ್ದು ಅಡುಗೆ ಸಿಬ್ಬಂದಿ ಸ್ವಚ್ಛಗೊಳಿಸದೇ ಸಜ್ಜಕ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.