ಬೆಟ್ಟಕ್ಕೆ ಬೆಂಕಿ ಇಟ್ಟರೆ… ಬದುಕಿಗೆ ಚಟ್ಟ ಕಟ್ಟಿದಂತೆ.

596

ಚಿಕ್ಕಬಳ್ಳಾಪುರ/ಚಿಂತಾಮಣಿ ತಾಲ್ಲೂಕಿನ ಬಿ ವಡ್ಡಹಳ್ಳಿ ಗ್ರಾಮದಲ್ಲಿ ನಡೆದ ಬೆಟ್ಟಕ್ಕೆ ಬೆಂಕಿ ಇಟ್ಟರೆ ಬದುಕಿಗೆ ಚಟ್ಟ ಕಟ್ಟಿದಂತೆ ಕೈವಾರ ಶ್ರೀನಿವಾಸ ಮತ್ತು ಡಾ.ಎಂ ಎನ್ ರಘು ಗಿಡಕ್ಕೆ ನೀರು ಹಾಕುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

ಮಾನವ ತನ್ನ ಮೋಜಿಗಾಗಿ ಪ್ರಕೃತಿ ದತ್ತವಾದ ಬೆಟ್ಟಗಳಿನ ,ಅರಣ್ಯ ಬೆಂಕಿ ಇಡುತ್ತಿದ್ದಾನೆ.ಆದರೆ ಅದರ ಬೀಕರ ಪರಿಣಾಮಗಳ ಬಗ್ಗೆ ಯೋಚನೆ ಮಾಡುತ್ತಿಲ್ಲ ಎಂದು ಡಾ.ಎಂ ಎನ್ ರಘು ಬೇಸರ ವ್ಯಕ್ತಿ ಪಡಿಸಿದರು.
ನಗರದ ಸರ್ಕಾರಿ ಮಹಿಳಾ ಎನ್.ಎಸ್.ಎಸ್ ಘಟಕ-೨ ಮತ್ತು ಕಾಲೇಜಿನ ನಿತ್ಯಸಿರಿ ಸಾಂಸ್ಕೃತಿಕ ಕಲಾಗರಿ ತಂಡದಿಂದ ಆಯೋಜಿಸಿದ್ದ ಬೆಟ್ಟಕ್ಕೆ ಬೆಂಕಿ ಇಟ್ಟರೆ. ಬದುಕಿಗೆ ಚಟ್ಟ ಕಟ್ಟಿದಂತೆ ಎಂಬ ಗ್ರಾಮಸ್ಥರ ರಲ್ಲಿ ಅರಿವು ಮೂಡಿಸಿದ್ದರು.

ಲಕ್ಷಾಂತರ ಪ್ರಾಣಿ ಮತ್ತು ಸಸ್ಯ ಪ್ರಪಂಚವನ್ನು ಹೊಂದಿರುವ ಕಾಡು ನಾಡಿನ ಉಸಿರಾಗಿದೆ,ಇದಕ್ಕೆ ಬೆಂಕಿ ಇಟ್ಟರೆ ತಾನೇ ನಾಶವಾಗುತ್ತೇನೆಂಬ ಅರಿವು ಮಾನವನಿಗೆ ಇಲ್ಲದಾಗುತ್ತಿದೆ ಎಂದು ಅವರು ಇಂದು ಪ್ರಮುಖವಾಗಿ ಮನವನೇ ಕಾಡನ್ನು ಸಂರಕ್ಷಣೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಕೈವಾರ ಶ್ರೀನಿವಾಸ ತಿಳಿಸಿದರು.

ಈ ವೇಳೆ ನಗರದ ಸರ್ಕಾರಿ ಮಹಿಳಾ ಕಾಲೇಜಿನ ಎನ್. ಎಸ್.ಎಸ್ ಅಧಿಕಾರಿ ಡಾ.ಎಂ ಎನ್ ರಘು ಮಾತನಾಡಿ ಭಾರತದಲ್ಲಿ ಅರಣ್ಯ ನಾಶದ ಪ್ರಮಾಣವು ಪ್ರತಿ ವರ್ಷ 33 ರಷ್ಟು ಬೆಂಕಿ ಗೆ ಆಹುತಿಯಾಗುತ್ತಿದೆ. ಭಾರತದಲ್ಲಿ ಬೆಂಕಿ ಗೆ ಆಹುತಿಯಾಗಿತ್ತಿರುವ ಅರಣ್ಯ ವು ಮಾನವನಿಂದ ಆಗುವ ಬೆಂಕಿ ಗೆ 99% ನಾಶವಾಗುತ್ತಿದೆ.ಪ್ರತಿ ವರ್ಷದ ಫೆಬ್ರವರಿ ಯಿಂದ ಜೂನ್ ತಿಂಗಳಿನವರೆಗೆ ಅತಿ ಹೆಚ್ಚು ಅರಣ್ಯ ಗಳು ಬೆಂಕಿಗೆ ನಾಶವಾಗುತ್ತಿವೆ.

ಕಾಡಿನಲ್ಲಿನ ಮರಗಳು ಮತ್ತು ಸಸ್ಯಗಳು ನಾಶಗೊಂಡ ಮಳೆ ಅಭಾವವಾಗುತ್ತಿದೆ.ಪ್ರಾಣಿಗಳಿಗೆ ಬೇಕಾದ ಹಸಿರು ಮೇವು ಹತ್ತಾರು ವರ್ಷ ಗಳು ಇಲ್ಲ ದಾಗಿ ಹಲವು ಸಂಕಷ್ಟಗಳನ್ನು ಎದುರಿಸ ಬೇಕಾಗಿದೆ. ಈ ಹಿನ್ನಲೆಯಲ್ಲಿ ನಮ್ಮ ಸುತ್ತಲಿನ ಅರಣ್ಯ ಮತ್ತು ಬೆಟ್ಟ ಗಳಿಗೆ ಬೆಂಕಿ ಹಾಕದಂತೆ ಎಚ್ಚರ ವಹಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ವಾಗಿದೆ.ಈ ಹಿನ್ನೆಲೆ ಯಲ್ಲಿ ಈ ಕಾರ್ಯಕ್ರಮ ವನ್ನು ಆಯೋಜಿಸಲಾಗಿದೆ ಎಂದು ಡಾ.ಎಂ.ಎನ್ ರಘು ಅಭಿಪ್ರಾಯ ಪಟ್ಟರು.ಕಲಾ ತಂಡದವರು ಹಳ್ಳಿಯ ಜನರಲ್ಲಿ ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸುವಂತಹ ಗೀತೆ ಗಳನ್ನು ಹಾಡಿದರು.

ಈ ಸಂದರ್ಭದಲ್ಲಿ ನಗರದ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿ ರಾಮ ಕೃಷ್ಣಪ್ಪ ಅದ್ಯಕ್ಷತೆ ವಹಿಸಿದ್ದರು.ಡಾ ಎಂ.ಎನ್ ರಘು,ಕೈವಾರ ಶ್ರೀನಿವಾಸ, ಮತ್ತು ಗ್ರಾಮಸ್ಥರು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.