ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ: ಅಧಿಕಾರಿಗಳಿಂದ ದಂಡ 

303

ಚಿಕ್ಕಬಳ್ಳಾಪುರ:ಗುಡಿಬಂಡೆ: ಪಟ್ಟಣದ ಹೋಟೆಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬೀಡಿಸಿಗರೇಟ್ ಸೇದುತ್ತಿರುವ ಧೂಮಪಾನಿಗಳಿಗೆ ಸಾರ್ವಜನಿಕ ಆಸ್ಪತ್ರೆ ಹಾಗೂಪ.ಪಂ ಅಧಿಕಾರಿಗಳು ದಂಡ ವಿಧಿಸಲಾಯಿತು.

ತಂಬಾಕು ಮತ್ತು ಧೂಮಪಾನ ನಿಷೇಧ ಎಂಬ ನಾಮ ಪಲಕಗಳನ್ನುಅಳವಡಿಸದ ಹಲವು ಹೋಟೇಲ್‌ಗಳು ಮತ್ತು ಅಂಗಡಿಗಳ ಮೇಲೆಆರೋಗ್ಯಾಧಿಕಾರಿಗಳು ದಾಳಿ ನಡೆಸಿ, ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದ 16ವ್ಯಕ್ತಿಗಳಿಗೆ ಸುಮಾರು 1080 ರೂಗಳು ದಂಡ ವಿಧಿಸಲಾಯಿತು ಹಾಗೂ ಕೆಲಹೋಟೆಲ್ ಮಾಲಿಕರಿಗೆ ನೋಟಿಸ್ ನೀಡಲಾಯಿತು.

ಈ ವೇಳೆ ಹಿರಿಯ ಆರೋಗ್ಯ ನಿರೀಕ್ಷಕ ನರಸಿಂಹಯ್ಯ, ಕಿರಿಯ ಆರೋಗ್ಯನಿರೀಕ್ಷಕ ಮಂಜುನಾಥ ಗಂಗಾಧರ ಅಬ್ದುಲ್ ರೆಹಮಾನ್, ಪ.ಪಂ ಆರೋಗ್ಯನಿರೀಕ್ಷಕಿ ಮಂಜುಳ ಪೊಲೀಸ್ ಇಲಾಖೆ ಸಿಬ್ಬಂದಿ ಗಂಗಪ್ಪ ಸೇರಿದಂತೆಹಲವರಿದ್ದರು.