ಡಿಪ್ತೀರಿಯಾ ಕಾಯಿಲೆಗೆ ಇಬ್ಬರು ಬಲಿ….

238

ಕೋಲಾರ/ಬಂಗಾರಪೇಟೆ:ಸಚಿವ ರಮೇಶ್​ಕುಮಾರ್​ ರವರ ತವರು ಜಿಲ್ಲೆಯಲ್ಲಿ ಅನಾರೋಗ್ಯ ತಾಂಡವವಾಡುತ್ತಿದೆ, ಕಳೆದೊಂದು ತಿಂಗಳಿಂದ ಜಿಲ್ಲೆ ಯಾದ್ಯಂತ ಡೆಂಗ್ಯೂ ಹಾಗೂ ಚಿಕನ್​ಗುನ್ಯಾ ಜ್ವರಗಳಿಂದ ಜನರು ನರಳುತ್ತಿದ್ದಾರೆ, ಈ ಬೆನ್ನಲ್ಲೇ ಜಿಲ್ಲೆಯ ಗ್ರಾಮವೊಂದರಲ್ಲಿ ಪತ್ತೆಯಾಗಿರುವ ಡಿಪ್ತೀರಿಯಾ ಕಾಯಿಲೆಗೆ ಇಬ್ಬರು ಮಕ್ಕಳು ಬಲಿಯಾಗಿದ್ದಾರೆ, ಆತಂಕದಿಂದ ತಮ್ಮ ಮಕ್ಕಳೊಂದಿಗೆ ಶಾಲೆಯ ಕೊಠಡಿಯೊಂದರಲ್ಲಿ ಸೇರಿರುವ ಗ್ರಾಮಸ್ಥರು, ಮಕ್ಕಳನ್ನು ಪರೀಕ್ಷೆ ನಡೆಸುತ್ತಿರುವ ವೈದ್ಯರ ತಂಡ ಇದೆಲ್ಲಾ ಕಂಡು ಬಂದಿದ್ದು ಬಂಗಾರಪೇಟೆ ತಾಲ್ಲೂಕು, ವಟ್ರಕುಂಟೆ ಗ್ರಾಮದಲ್ಲಿ.ಹೌದು ಕಳೆದ ಮೂರು ದಿನಗಳಲ್ಲಿ ಡಿಪ್ತೀರಿಯಾ ಕಾಯಿಲೆಗೆ ಇಬ್ಬರು ಮಕ್ಕಳು ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಆತಂಕ ಮನೆ ಮಾಡಿದ್ದು ಗ್ರಾಮಕ್ಕೆ ಜಿಲ್ಲೆಯ ವೈದ್ಯರ 

ತಂಡ ಬೇಟಿ ನೀಡಿ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಮೂರು ದಿನಗಳ ಹಿಂದೆ ಡಿಪ್ತೀರಿಯಾ ಅಥವಾ ಗಂಟಲು ಬೇನೆಯಿಂದ 11 ವರ್ಷದ
ಸಾಕೀರ್​ ಪಾಷಾ ಮೃತಪಟ್ಟಿದ್ದಾನೆ. ಇಂದು ಮುಂಜಾನೆ ಇದೇ ಗ್ರಾಮದ ಆರು ವರ್ಷದ ಝಕ್ರು ಎಂಬ ಬಾಲಕ ಮೃತಪಟ್ಟಿರುವ ಹಿನ್ನೆಲೆಯಲ್ಲಿ
ಗ್ರಾಮದ ಜನರಲ್ಲಿ ಆತಂಕ ಹೆಚ್ಚಾಗಿದ್ದು. ಗ್ರಾಮದಲ್ಲಿ ವೈದ್ಯರ ತಂಡ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಗ್ರಾಮದಲ್ಲಿ ಡಿಪ್ತೀರಿಯಾ ಕಾಯಿಲೆ ಪತ್ತೆಯಾಗಿದ್ದು, ಇದು ಒಂದರಿಂದ 15 ವರ್ಷದ ಒಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕಾಯಿಲೆಯಾಗಿದ್ದು. ಐದು ವರ್ಷದೊಳಗಿನ ಮಕ್ಕಳಲ್ಲಿ ಸರಿಯಾದ ಲಸಿಕೆ ಹಾಕಿಸದೆ ಇದ್ದಲ್ಲಿ ಸಾಮಾನ್ಯವಾಗಿ ಕಂಡು ಬರುವ ಕಾಯಿಲೆ ಎನ್ನಲಾಗಿದ್ದು. ಇದೊಂದು ಸೋಂಕು ರೋಗವಾಗಿದ್ದು ಮಕ್ಕಳಲ್ಲಿ ಒಬ್ಬರಿಂದ ಬಬ್ಬರಿಗೆ ಶೀಘ್ರವಾಗಿ ಸೋಂಕು ಹರಡುತ್ತದೆ. ಸದ್ಯ
ಗ್ರಾಮದಲ್ಲಿ 15 ಜನ ಮಕ್ಕಳ ಮಾದರಿ ಸಂಗ್ರಹಿಸಿದ್ದು, ಐದು ಜನ ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. ಸದ್ಯ ವಟ್ರಕುಂಟೆ ಗ್ರಾಮ ಸೇರಿದಂತೆ ಸುತ್ತ
ಮುತ್ತಲ ಗ್ರಾಮಗಳಲ್ಲೂ ಡಿಪ್ತೀರಿಯಾ ರೋಗದ ಕುರಿತು ಸರ್ವೆ ಮಾಡಲಾಗುತ್ತಿದೆ.ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲಿ ಸದ್ಯ ಅನಾರೋಗ್ಯವೇ ತಾಂಡವಾಡುತ್ತಿದ್ದು, ಒಂದೆಡೆ ಜ್ವರದಿಂದ ಜನರೆಲ್ಲಾ ತತ್ತರಿಸಿ
ಹೋಗಿದ್ರೆ, ಸದ್ಯ ವಟ್ರಕುಂಟೆ ಗ್ರಾಮದಲ್ಲಿ ಗಂಟಲುಮಾರಿಯಿಂದ ಮಕ್ಕಳ ಸಾವಿನ ಸರಣಿ ಆರಂಭವಾಗಿರೋದು ಗ್ರಾಮಸ್ಥರಲ್ಲಿ ಆತಂಕ
ಮೂಡಿಸಿದ್ದು ಕೂಡಲೇ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಅನ್ನೋದು ಗ್ರಾಮಸ್ಥರ ಆಗ್ರಹವಾಗಿದೆ.