ಮನೆ ಟ್ಯಾಗ್ಗಳು Gudibande

ಟ್ಯಾಗ್: gudibande

ವಿಶ್ವ ಜನಸಂಖ್ಯಾ ದಿನಾಚರಣೆ,ಜಾಗೃತಿ ಜಾಥ

0
ಚಿಕ್ಕಬಳ್ಳಾಪುರ/ಗುಡಿಬಂಡೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ವತಿಯಿಂದ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಜನಸಂಖ್ಯೆ ನಿಯಂತ್ರಣ ಕುರಿತ ಜಾಗೃತಿ ಜಾಥಗೆ ಪಟ್ಟಣ ಪಂಚಾಯತಿ ಅಧ್ಯಕ್ಷ ಜಿ.ಎಸ್.ಚಂದ್ರಶೇಖರ ನಾಯ್ಡು ಚಾಲನೆ ನೀಡಿದರು. ಈ ವೇಳೆ ಮಾತನಾಡಿದ...

ವಿವಿಧ ಕ್ಷೇತ್ರಗಳ ಸಾಧಕರಿಗೆ ಗಾಯತ್ರಿ ಪುರಸ್ಕಾರ

0
 ಚಿಕ್ಕಬಳ್ಳಾಪುರ/ಗುಡಿಬಂಡೆ: ಪಟ್ಟಣದ ಗಾಯತ್ರಿ ಪ್ರಸಾದ ಭವನದಲ್ಲಿ ನಡೆಯುತ್ತಿರುವ 29 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ವೇಳೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಆರ್.ಕೆ.ಪದ್ಮನಾಭ, ಸೋಮಶೇಖರ್, ಸದಾಶಿವ...

ಪ್ರತಿಯೊಬ್ಬರೂ ಸಸಿ ನೆಟ್ಟು ಪೋಷಣೆ ಮಾಡಿ

0
ಚಿಕ್ಕಬಳ್ಳಾಪುರ/ಗುಡಿಬಂಡೆ:ದಿನೆದಿನೇ‌ ಹೆಚ್ಚುತ್ತಿರುವ ತಾಪಮಾನವನ್ನು ಕಡಿಮೆ ಮಾಡಲು ಹಾಗೂಉತ್ತಮ ಮಳೆಯಾಗಲು ಪ್ರತಿಯೊಬ್ಬರು ಕನಿಷ್ಟ ಟ ೧೦ ಸಸಿಯನ್ನಾದರೂ ನೆಟ್ಟು ಪೋಷಣೆ ಮಾಡ ಬೇಕೆಂದು ಶಾಸಕ ಎಸ್ಎನ್.ಸುಬ್ಬಾರೆಡ್ಡಿ ಕರೆ ನೀಡಿದರು. ಪಟ್ಟಣದ ತಾಲ್ಲೂಕು ಕಛೇರಿ  ಆವರಣದಲ್ಲಿ ಕೃಷಿ ಇಲಾಖೆ, ತಾಲ್ಲೂಕು ಪಂಚಾಯತಿ ಹಾಗೂ ಕೃಷಿಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಕೃಷಿಮಾಹಿತಿ ಆಂದೋಲನ ಹಾಗೂ ವಿಶ್ವ ಪರಿಸರ ದಿನಾಚರಣೆಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ,ಕೃಷಿ ಮಾಹಿತಿ ರಥಕ್ಕೆ ಚಾಲನೆ ನೀಡಿ ಮಾತನಾಡಿದಅವರು ಗಡಿಭಾಗದಲ್ಲಿರುವ ಈ ಭಾಗ ಸತತ ಬರಗಾಲಕ್ಕೆ ತುತ್ತಾಗುತ್ತಿದೆ. ಸಸಿಗಳನ್ನು ನೆಟ್ಟು ಪರಿಸರ ಸಮತೋಲನಕಾಪಾಡಿದಾಗ ಕಾಲಕಾಲಕ್ಕೆ ಮಳೆಯಾಗಿ ಉತ್ತಮ ಬೆಳೆ ಬೆಳೆಯಬಹುದು. ಆದ್ದರಿಂದ ಪ್ರತಿಯೊಬ್ಬರು ತಮ್ಮ ಜಮೀನುಗಳ ಬಳಿ, ಮನೆಗಳ ಹತ್ತಿರ ಸಸಿಗಳನ್ನು ನೆಡುವ ಮೂಲಕ ಈ ಭಾಗವನ್ನು ನಿತ್ಯ ಹರಿದ್ವರ್ಣಮಾಡಬಹುದಾಗಿದೆ ಎಂದರು.ನಂತರ ಮಾತನಾಡಿದ ಪ.ಪಂ ಅಧ್ಯಕ್ಷ ಚಂದ್ರಶೇಖರ ನಾಯ್ಡು ರೈತರು ತಮ್ಮ ಭೂಮಿಯಲ್ಲಿ ಯಾವ ಬೆಳೆ ಚೆನ್ನಾಗಿ ಬೆಳೆಯುತ್ತದೆ...

ಡೆಂಗ್ಯೂ ನಿಯಂತ್ರಣ ಕುರಿತ ಜಾಗೃತಿ ಜಾಥಾ

0
ಚಿಕ್ಕಬಳ್ಳಾಪುರ/ಗುಡಿಬಂಡೆ: ತಾಲೂಕು  ಆರೋಗ್ಯ ಇಲಾಖೆ ವತಿಯಿಂದ ರಾಷ್ಟ್ರೀಯ ಡೆಂಗ್ಯೂ ಜ್ವರ ವಿರೋಧಿದಿನಾಚರಣೆ ಅಂಗವಾಗಿ ಡೆಂಗ್ಯೂ ಜ್ವರದ ನಿಯಂತ್ರಣ ಕುರಿತ ಜಾಗೃತಿ ಜಾಥಾಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಡೆಂಗ್ಯೂ ಹಾಗೂ ಚಿಕನ್ ಗುನ್ಯ ರೋಗ ತಡೆಗಟ್ಟುವುದು ಹಾಗೂ ಸೊಳ್ಳೆ ಕಡಿತದಿಂದಸ್ವಯಂ ರಕ್ಷಿಸಿಕೊಳ್ಳುವ ಕುರಿತು ಜಾಗೃತಿ ಜಾಥಗೆ ತಾ.ಪಂ. ಉಪಾಧ್ಯಕ್ಷ ಬೈರಾರೆಡ್ಡಿ ಚಾಲನೆ ನೀಡಿಮಾತನಾಡಿದ ಅವರು ಮಾರಕ ಡೆಂಗ್ಯೂ ರೋಗ ನಿಯಂತ್ರಣಕ್ಕೆ ನಾಗರೀಕರು ಸಹಕರಿಸಬೇಕು,ತಮ್ಮ ಮನೆಗಳು, ಶಾಲೆ ಸೇರಿದಂತೆ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು,ಡೆಂಗ್ಯೂ ರೋಗ ತಡೆಗಟ್ಟಲು ಸ್ಥಳೀಯ ಸಂಸ್ಥೆಗಳೊಂದಿಗೆ ಸಾರ್ವಜನಿಕರು ಕೈ ಜೋಡಿಸಬೇಕುಎಂದರು. ನಂತರ ಮಾತನಾಡಿದ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿರೋಗ ವಾಹಕ ಈಡಿಸ್ ಸೊಳ್ಳೆಗಳಿಂದ ಹರಡುವ ಡೆಂಗ್ಯೂ, ಚಿಕನ್‌ಗುನ್ಯ ರೋಗಗಳು ಮತ್ತುಅವುಗಳ ನಿಯಂತ್ರಣ ಕಾರ್ಯಗಳ ಬಗ್ಗೆ ಸಾರ್ವಜನಿಕರು ಮತ್ತು ಸಮುದಾಯದಲ್ಲಿ ಜಾಗೃತಿಮೂಡಿಸುವ ಸಲುವಾಗಿ ಈ ಜಾಗೃತಿ ಜಾಥ ಹಮ್ಮಿಕೊಳ್ಳಲಾಗಿದೆ. ಸೊಳ್ಳೆಗಳ ಸಂತಾನವೃದ್ಧಿಯಾಗುವ ಸ್ಥಳಗಳನ್ನು ನಿವಾರಿಸುವುದರ ಮೂಲಕ ಡೆಂಗ್ಯೂ ಚಿಕನ್‌ಗುನ್ಯ ಜ್ವರವನ್ನುತಡೆಗಟ್ಟಬಹುದು. ಡೆಂಗ್ಯೂ ಚಿಕನ್‌ಗುನ್ಯ ಜ್ವರ ಪಿಡುಗಿನಂತೆ ಹರಡುವ ಸಾಧ್ಯತೆಯಿದ್ದು, ಈ ಬಗ್ಗೆಎಚ್ಚರಿಕೆ ವಹಿಸಬೇಕು ಎಂದು ಹೇಳಿದರು. ನಂತರ ತಾಲ್ಲೂಕು ವೈದ್ಯಾಧಿಕಾರಿ ಡಾ.ಮಹಿಮಾ ಮಾತನಾಡಿ ಡೆಂಗ್ಯೂ ಮತ್ತು ಚಿಕನ್‌ಗುನ್ಯಾಜ್ವರ ಈಡಿಸ್ ಜಾತಿಯ ಸೊಳ್ಳೆಯ ಕಚ್ಚುವಿಕೆಯಿಂದ ಹರಡುತ್ತದೆ. ಈ ಸೊಳ್ಳೆ ಹಗಲುಹೊತ್ತಿನಲ್ಲೇ ಕಚ್ಚುತ್ತದೆ.  ಯಾವುದೇ ಜ್ವರವಿರಲಿ ಶೀಘ್ರ ರಕ್ತ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆಯಿರಿ.ಮನೆಯ ಒಳಗೆ ಮತ್ತು ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ ಸೊಳ್ಳೆ ಉತ್ಪತ್ತಿಯನ್ನುತಟೆಗಟ್ಟಿ. ನಿಂತ ನೀರು ಸೊಳ್ಳೆಯ ತವರು, ನೀರಿನ ಶೇಕರಣೆ ಸಲಕರಣೆಗಳನ್ನು ಭದ್ರವಾಗಿಮುಚ್ಚಿಡಿ. ಮಲಗುವಾಗ ಸೊಳ್ಳೆ ಪರದೆಯನ್ನು ಉಪಯೋಗಿಸಿ.  ಸಮಗ್ರ ಕೀಟನಿಯಂತ್ರಣದಲ್ಲಿ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿ ಎಂದರು. ಪಟ್ಟಣದ ಮುಖ್ಯ ರಸ್ತೆಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾಕಾರ್ಯಕರ್ತೆಯರು ಡೆಂಗ್ಯೂ ನಿಯಂತ್ರಣದ ಕುರಿತ ಕ್ರಮಗಳ ಕುರಿತು ಮಾಹಿತಿ ನೀಡುತ್ತಾಜಾಗೃತಿ ಜಾಥ ನಡೆಸಲಾಯಿತು. ಈ ವೇಳೆ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ರಾಮಾಂಜಿ,ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ಪ.ಪಂ. ಸದಸ್ಯ ರಿಯಾಜ್ ಪಾಷ,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಮುಖಂಡ ಮೂರ್ತಿ,ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಯಾದ ನರಸಿಂಹಯ್ಯ, ನಟರಾಜ್, ಮಂಜುನಾಥ್,ಗಂಗಾಧರ್ ಸೇರಿದಂತೆ ಹಲವರು ಇದ್ದರು.

ಗೋ ಹತ್ಯೆ ನಿಷೇಧ ವಿರುದ್ದ ಪ್ರತಿಭಟನೆ

0
ಚಿಕ್ಕಬಳ್ಳಾಪುರ/ಗುಡಿಬಂಡೆ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯನ್ನು ಖಂಡಿಸಿ ಸಿಪಿಎಂ ಪಕ್ಷದ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಸಿಪಿಎಂ ಪಕ್ಷದ ಮುಖಂಡ ಹೆಚ್.ಪಿ.ಲಕ್ಷ್ಮೀನಾರಾಯಣ ಕೇಂದ್ರ...

ಸರ್ಕಾರಿ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ

0
ಚಿಕ್ಕಬಳ್ಳಾಪುರ/ಗುಡಿಬಂಡೆ: ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ತಾ.ಪಂ. ಕೆಡಿಪಿ ನಾಮಿನಿ ಸದಸ್ಯ ಕೃಷ್ಣೇಗೌಡ ತಿಳಿಸಿದರು. ಪಟ್ಟಣದ ತೋಟಗಾರಿಕೆ ಇಲಾಖೆಯಲ್ಲಿ ನಡೆದ ವಿವಿಧ ಯೋಜನೆಗಳಡಿ ಫಲಾನುಭವಿಗಳ ಆಯ್ಕೆಯನ್ನು ಲಾಟರಿ ಮೂಲಕ ಆಯ್ಕೆ ಮಾಡುವ...

ಸ್ವಚ್ಛತೆಯಿಂದ ಉತ್ತಮ ಆರೋಗ್ಯ ಸಾಧ್ಯ

0
ಗುಡಿಬಂಡೆ: ನಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛತೆಯಿಂದ ಕೂಡಿದರೆ ನಾವು ಉತ್ತಮ ಆರೋಗ್ಯ ಪಡೆಯಬಹುದೆಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷ ಆನಂದ್ ತಿಳಿಸಿದರು. ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯ ವಸತಿ ಗ್ರಹಗಳ ಬಳಿಯಿರುವ ತಾಜ್ಯ...

ದೇವೇಗೌಡರವರ ಹುಟ್ಟುಹಬ್ಬ ಆಚರಣೆ

0
ಗುಡಿಬಂಡೆ: ಮಾಜಿ ಪ್ರಾಧಾನಿ ಹೆಚ್.ಡಿ.ದೇವೆಗೌಡರವರ ೮೫ನೇ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು-ಹಂಪಲುಗಳನ್ನು ವಿತರಣೆ ಮಾಡಲಾಯಿತು. ಈ ವೇಳೆ ಮಾತನಾಡಿದ ಜೆಡಿಎಸ್ ಮುಖಂಡ ಗುಂಜೂರು ಶ್ರೀನಿವಾಸರೆಡ್ಡಿ, ಪ್ರಧಾನಿಗಳಾಗಿದ್ದ ದೇವೆಗೌಡರು ರಾಷ್ಟ್ರದ...

ಗಿಡ ನೆಡುವ ಕಾರ್ಯ ನಿರಂತರವಾಗಿರಲಿ

0
ಚಿಕ್ಕಬಳ್ಳಾಪುರ /ಗುಡಿಬಂಡೆ: ಭೂಮಿಯ ಮೇಲಿನ ಉಷ್ಣಾಂಶ ಹೆಚ್ಚಾಗಲು ಮರಗಳು ಕಡಿಮೆಯಾಗಿರುವುದೇ ಕಾರಣವಾಗಿದ್ದು,ಪ್ರತಿಯೊಬ್ಬರು ಗಿಡ ನೆಡುವ ಕಾರ್ಯವನ್ನು ನಿರಂತರವಾಗಿ ಮಾಡಬೇಕೆಂದು ಸ್ಥಳೀಯ ಪ.ಪಂ. ಅಧ್ಯಕ್ಷಚಂದ್ರಶೇಖರ್‌ನಾಯ್ಡು ತಿಳಿಸಿದರು. ಪಟ್ಟಣದ ಕನ್ನಡ ಸೇನೆ ಸಂಘದ ವತಿಯಿಂದ ರಾಮಪಟ್ಟಣ ರಸ್ತೆ...

ಅಪರಿಚಿತ ವಾಹನ ಡಿಕ್ಕಿ; ಪಾದಚಾರಿ ಸ್ಥಳದಲ್ಲೇ ಸಾವು

0
 ಚಿಕ್ಕಬಳ್ಳಾಪುರ/ಗುಡಿಬಂಡೆ: ಪಾದಚಾರಿಗೆ ಅಪರಿಚಿತ ವಾಹನ ಡಿಕ್ಕಿಹೊಡೆದು ಪರಾರಿಯಾಗಿದ್ದು, ಘಟನೆಯಲ್ಲಿ ಗಾಯಗೊಂಡ ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಚಿಕ್ಕಬಳ್ಳಾಪುರ ರಸ್ತೆಯ ರೇಣುಮಾಕಲಹಳ್ಳಿಯ ಆಂಜನೇಯ ದೇವಾಲಯದ ಬಳಿ ಭಾನುವಾರ ರಾತ್ರಿ ನಡೆದಿದೆ. ಸುಮಾರು 22 ರಿಂದ...

MOST POPULAR

HOT NEWS