‘ನಮ್ಮೂರು ಟಿವಿ ‘ ಎಂಬ ಟೈಟಲ್ ಆಯ್ಕೆ ಮಾಡಿದ್ದು ಒಂದು ಕುತೂಹಲಕಾರಿ ವಿಷಯ. ಕಾರಣ ನಮ್ಮೂರು ಎಂದಾಕ್ಷಣ ಎಲ್ಲರ ಮನದಲ್ಲೂ ಸ್ವಾಭಿ ಮಾನದ ಸಂತಸ ತಕ್ಷಣವೇ ನಮ್ಮೂರಿನ ಸುದ್ದಿ ಎಂಬ ಭಾವನೆ ಕುತೂಹಲ ಮೂಡುತ್ತದೆ. ಈ ಭಾವನೆಗಳನ್ನು ಸತ್ಯಗೊಳಿಸಲು ಹಾಗೂ ಕರ್ನಾಟಕ ರಾಜ್ಯದ ಸ್ಥಳೀಯ ಸುದ್ದಿಗಳನ್ನು ರಾಜ್ಯದ ಯಾವುದೇ ಮೂಲೆಯಲ್ಲಾದರೂ ಸರಿಯೇ ಕ್ಷಣಾರ್ಧದಲ್ಲಿ ‘ನಮ್ಮೂರು’ ಟಿವಿ ಮೂಲಕ ಸರ್ವರಿಗೂ ತಲುಪಿಸ ಬೇಕೆಂಬ ಉದ್ಧೇಶದೊಂದಿಗೆ ನಮ್ಮೂರು ಇಂದಿನ ಮಾದ್ಯಮ ಲೋಕಕ್ಕೆ ಕಾಲಿಡುತ್ತಿದೆ.

ಇಂದಿನ ವೈಜ್ಞಾನಿಕ, ತಾಂತ್ರಿಕ, ಆಧುನಿಕ, ವೇಗದ , ಡಿಜಿಟಲ್‌ ಕಾಲದಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಜನತೆ ಟಿವಿಯ ಮುಂದೆ ಕುಳಿತು ಗಂಟೆಗಳ ಲೆಕ್ಕದಲ್ಲಿ ಕಾಲಹರಣ ಮಾಡುವ ಅಥವಾ ದಿನಕ್ಕೆ ಕನಿಷ್ಠ ಅರ್ಧ ಗಂಟೆಯಾದರೂ ಮೀಸಲಿಟ್ಟು ದಿನ ಪತ್ರಿಕೆಗಳು ಓದುವು ಸಮಯವೂ ಜನಸಾಮಾನ್ಯರಿಗೆ ಇಲ್ಲದಂತಾಗಿದೆ. ಯಾಂತ್ರಿಕ ಜೀವನಕ್ಕೆ ಗಂಟು ಬಿದ್ದು ನಿತ್ಯಜೀವನದ ಸಮಾಜದ ಆಗು-ಹೋಗುಗಳಬಗ್ಗೆ ಅರಿತುಕೊಳ್ಳಲಾಗದೆ ನಿರಾಸೆ ಹೊಂದುತ್ತಿರುವ ಪ್ರಜ್ಞಾವಂತ ನಾಗರೀಕರಿ ಗೋಸ್ಕರ ನಮ್ಮೂರು ಟಿವಿ ಎಂಬ ಮೊಬೈಲ್ ಟಿವಿ ಅಂದರೆ ನಿಮ್ಮ ಕೈಯಲ್ಲಿನ ಮೊಬೈಲಿಗೆ ಎಲ್ಲ ಸುದ್ದಿಗಳನ್ನು ತಲುಪಿಸುವ ಒಂದು ವಿನೂತನ ಪ್ರಯತ್ನ ನಮ್ಮದಾಗಿದೆ. ಅಲ್ಲದೆ ಇಂದು ಮಾದ್ಯಮ ಕೇವಲ ಮಾದ್ಯಮವಾಗಿಯೇ ಉಳಿಯದೆ ಕೆಲವರಿಗೆ ‘ವ್ಯವಹಾರ’ವಾಗಿ ಮಾರ್ಪಟ್ಟಿರುವುದೆ ಒಂದು ದುರಂತ, ರಾಜ್ಯದಲ್ಲಿ ಈಗಾಗಲೇ ೧೫ ಕ್ಕೂ ಅಧಿಕ ಟಿವಿ ಚಾನೆಲ್‌ಗಳು ಹಾಗೂ ಡಜನ್ ಗೂ ಅಧಿಕ ದಿನ ಪತ್ರಿಕೆಗಳು ಇವುಗಳ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲೂ ಸುದ್ದಿ ಮನೆಗಳು ಹುಟ್ಟಿಕೊಂಡವೆ. ಇವೆಲ್ಲದರ ಮಧ್ಯೆ ನ್ಯಾಯ ಸಮ್ಮತ, ನಿಖರ ಸುದ್ದಿಯನ್ನ ತಲುಪಿಸುವ ಉದ್ದೇಶದಿಂದ ಹುಟ್ಟಿಕೊಂಡ ತಾಣವೇ ನಿಮ್ಮ “ನಮ್ಮೂರು ಟಿವಿ”

ನಮ್ಮೂರು ವೆಬ್ ಚಾನೆಲ್ ಬಗ್ಗೆ ಹೇಳಬೇಕೆಂದರೆ ಹೆಸರೇ ಹೇಳುವಂತೆ ಇಂದಿ‌ನ ಪತ್ರಿಕೋದ್ಯಮ, ರಾಜಕೀಯ ಹೀಗೆ ನಾನಾ ಕ್ಷೇತ್ರಗಳ ಅನ್ಯಾಯಕ್ಕೆ ಬೇಸತ್ತ ಹಾಗೂ ನೇರ, ನಿಷ್ಠುರ, ಯಾವುದೇ ರಾಜಿ ಮುಲಾಜಿಲ್ಲದೆ ಪತ್ರಿಕೋದ್ಯಮದಲ್ಲಿ ಸಾಧಿಸಬೇಕೆಂಬ ಛಲದೊಂದಿಗೆ ಸ್ಥಳೀಯ ಪತ್ರಕರ್ತರೇ ಸೇರಿ ನಿರ್ಮಿಸುತ್ತಿರುವ ಸುಂದರ ಚಾನೆಲ್‌ ‘ ನಮ್ಮೂರು’ ಟಿವಿ.

ಇಂದಿನ ಡಿಜಿಟಲ್‌ ಯುಗದಲ್ಲಿ ಮೀಸೆ ಚಿಗುರದ ಹುಡುಗನಿಂದಾ ಹಿಡಿದು ಮುಪ್ಪಿನ ಅಂಚಿನ ಮುದುಕರ ಕೈಯಲ್ಲೂ ಮೊಬೈಲ್‌ ಇದೆ. ಇದ್ದ ಮೊಬೈಲಿನಲ್ಲೇ ಸುದ್ದಿ ಸಿಕ್ಕರೆ ಸೂಪರ್ ಅಲ್ವಾ. ಎಸ್ ಆಸಕ್ತರಿಗೆ ನಿಂತಲ್ಲೇ, ಕುಳಿತಲ್ಲಿಯೇ ರಾಜ್ಯದ ಮೂಲೆ ಮೂಲೆ ಸುದ್ದಿಯನ್ನ ಕ್ಷಣಾರ್ಧದಲ್ಲಿ ನೀಡುವುದೇ ನಮ್ಮ ಗುರಿಯಾಗಿದೆ. ಯಾವುದೇ ಉದ್ಯಮ, ರಾಜಕೀಯ ನಾಯಕರ ನಂಟಿಲ್ಲದೆ ಕಟ್ಟುತ್ತಿರುವ ‘ ನಮ್ಮೂರು ‘ಟಿವಿ ಯಲ್ಲಿ ಯಾವುದೇ ಅನ್ಯಾಯ ಅಥವಾ ರಾಜಿಗಳಿಗೆ ಖಂಡಿತ ಅವಕಾಶವಿಲ್ಲ. ಎಂಥಾಹುದೆ ಸುದ್ದಿಯಾದರೂ ನ್ಯಾಯ ಸಮ್ಮತವಾಗಿ ತೋರಿಸುವುದೇ ನಮ್ಮೂರು ಟಿವಿಯ ಧ್ಯೇಯ.

ಕೊನೆಯದಾಗಿ ವೆಬ್ ಚಾನೆಲ್ ಮೂಲಕ ನಮ್ಮೂರು ತೆರೆದುಕೊಂಡು ನಿಮ್ಮ ಮೊಬೈಲ್ ಗೆ ಪ್ರವೇಶಿಸಿ ಬಳಿಕ ನಿಮ್ಮ ಮನ, ಮತ್ತು ಟಿವಿ ಮೂಲಕ ನಿಮ್ಮ ಮನೆಯನ್ನೂ ಪ್ರವೇಶಿಸಬೇಕೆಂಬ ಇರಾದೆ ನಮ್ಮದಾಗಿದೆ.